ಶತಮಾನೋತ್ತರ ವಿಂಶತಿ ವರ್ಷದಲ್ಲಿರುವ ಗುರುವಾಯನಕೆರೆ ಶಾಲೆಯಲ್ಲಿ ವರ್ಣರಂಚಿತ ಚಿತ್ತಾರಗಳು ಗಮನ ಸೆಳೆಯುತ್ತಿರುವುದು.
ಮನೋಹರ್ ಬಳಂಜ ಬೆಳ್ತಂಗಡಿ
ನೂರಾರು ವಿದ್ಯಾರ್ಥಿಗಳಿಂದ ತುಂಬಿಹೋಗುತ್ತಿದ್ದ ಶಾಲೆಯಲ್ಲಿ ಕ್ಷಿಣಿಸಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕಾಗಿ ಇಲ್ಲಿನ ಎಸ್ಡಿಎಂಸಿ, ಶಿಕ್ಷಕರು ಮತ್ತು ಪಾಲಕರು ಜತೆಗೂಡಿ ಹೊಸಕ್ರಮ ಅನುಸರಿಸಿದ್ದಾರೆ. ಅದಕ್ಕಾಗಿ ಸರ್ಕಾರಿ ಅನುದಾನ ನಿರೀಕ್ಷಿಸದೆ ಹಳೇ ವಿದ್ಯಾರ್ಥಿಗಳ ಸಹಕಾರದಲ್ಲಿ ಮುಂದಡಿ ಇಡಲಾಗಿದೆ.
ಹೊಸ ಕಟ್ಟಡ ನಿರ್ಮಾಣ
120 ವರ್ಷ ಪೂರೈಸಿ ಮುನ್ನಡೆಯುತ್ತಿರುವ ಗುರುವಾಯನಕೆರೆ ಶಾಲೆಯಲ್ಲಿ ಕಟ್ಟಡಗಳು ಹಳೆಯದಾಗಿದ್ದು, ಪ್ರಸ್ತುತ 600 ಅಡಿ ಸುತ್ತಳತೆಯ ಹೊಸ ಆರ್ಸಿಸಿ ಕಟ್ಟಡ ಶಾಲೆ ನಿರ್ಮಾಣಕ್ಕೆಂದೇ ರಚಿಸಿದ್ದಾರೆ. 2022-23ರಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಲು ಸರ್ಕಾರ ನೀಡಿದ ಅವಕಾಶ ಬಳಸಿ ಸ್ವಂತ ಖರ್ಚಿನಲ್ಲಿ ಶಿಕ್ಷಕರನ್ನು ನೇಮಿಸಿರುವುದರ ಜತೆಗೆ ಎಲ್.ಕೆ.ಜಿ., ಯು.ಕೆ.ಜಿ. ಪ್ರಾರಂಭಿಸಲಾಯಿತು. ಬಳಿಕ ಮೂರೇ ವರ್ಷದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಹೊಸ ಕಟ್ಟಡ ರಚಿಸಲಾಗಿದೆ.
ಮೂಲಸೌಕರ್ಯ ಅಭಿವೃದ್ಧಿ
ಅತ್ಯಾಧುನಿಕ ಸೌಲಭ್ಯಗಳು
"
ಹಳೇ ವಿದ್ಯಾರ್ಥಿಗಳನ್ನೇ ಗಮನದಲ್ಲಿಟ್ಟು ಈ ಕಾರ್ಯಕ್ಕೆ ಮುಂದಡಿ ಇಟ್ಟೆವು. 10 ಸಾವಿರ ಮೇಲ್ಪಟ್ಟು ದೇಣಿಗೆ ನೀಡುವವರನ್ನು ದೂರವಾಣಿ ಮೂಲಕವೇ ಸಂಪರ್ಕಿಸಿ ದೇಣಿಗೆ ಸಂಗ್ರಹಿಸಿದ್ದೇವೆ. ಎಕ್ಸೆಲ್ ಸಂಸ್ಥೆಯ ಅಧ್ಯಕ್ಷರು, ಹೇಮಂತ ರಾವ್ ಯರ್ಡೂರು, ರಾಮಕೃಷ್ಣ ನಾಯಕ್ ಮೊದಲಾದವರು ದೊಡ್ಡ ಮೊತ್ತ ನೀಡಿದ್ದಾರೆ. ಈ ಕಟ್ಟಡಕ್ಕೆ ಮತ್ತು ಪೂರಕ ಕೆಲಸಕ್ಕೆ 10 ಲಕ್ಷ ಖರ್ಚಾದರೆ, ನನ್ನ ಅಧ್ಯಕ್ಷ ಅವಧಿತ ಮೂರು ವರ್ಷಗಳಲ್ಲಿ 20 ಲಕ್ಷ ರೂ. ಗಳ ಕೆಲಸ ಆಗಿದೆ.
— ಹಾಜಿ ಅಬ್ದುಲ್ ಲೆತೀಫ್, ಎಸ್ಡಿಎಂಸಿ ಅಧ್ಯಕ್ಷ
ವೃತ್ತಿ ಬದುಕಿನ ಕೊನೆಯ ಹಂತದಲ್ಲಿರುವ ನಾನು ಇಲ್ಲಿಗೇ ಆಗಮಿಸಿ ನಾಲ್ಕು ವರ್ಷಗಳಾಗಿದ್ದು, ಎಲ್ಲ ರೀತಿಯಿಂದ ಎಸ್ಡಿಎಂಸಿ, ಪಾಲಕರಿಗೆ ಸಹಕರಿಸಿದ್ದೇನೆ. ಈ ಶಾಲೆಯ ಬಗ್ಗೆ ಇಲ್ಲಿನ ಹಳೇ ವಿದ್ಯಾರ್ಥಿಗಳಿಗಿರುವ ಅಭಿಮಾನ ನೋಡಿ ಖುಷಿಯಾಗಿದೆ. ನಿಜಕ್ಕೂ ಇಲ್ಲಿ ಮಾದರಿ ಕಾರ್ಯ ನಡೆದಿದೆ. ಶಿಕ್ಷಕರೂ ಇದಕ್ಕೆ ಕೈಜೋಡಿಸಿದ್ದಾರೆ.
— ಉಮಾ ಗೌಡ, ಮುಖ್ಯ ಶಿಕ್ಷಕಿ