ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಕಾಶಿಪಟ್ಣದ ಕಲ್ಲುಬಂಡೆಗಳ ನಡುವಿನ ಗುಹಾಂತರ ದೇವಸ್ಥಾನದಲ್ಲಿ ಆದಿಶಕ್ತಿ ಅಮ್ಮನವರ ಉದ್ಭವ ಮೂರ್ತಿಗೆ ಕಾವೇರಿ ಸಂಕ್ರಮಣದಂದು ಜಳಕ, ಕಾಡಿನ ಮೆರವಣಿಗೆ, ನೈಸರ್ಗಿಕ ಜಲಧಾರೆಯಲ್ಲಿ ಅಭಿಷೇಕ ಹಾಗೂ ತೀರ್ಥಸ್ನಾನ ನಡೆಯಿತು.
ಇಲ್ಲಿ ದೇವರ ಅಭಿಷೇಕಕ್ಕೆ ಮೂರು ಕಡೆಯಿಂದ ನೀರು ತರುವ ಸಂಪ್ರದಾಯ. ಮೊದಲಿಗೆ ದೇವಸ್ಥಾನದ ಸಮೀಪದ ಪ್ರಕೃತಿದತ್ತ ರಾಮಕೆರೆಯಿಂದ ನೀರು ತರಲಾಗುತ್ತದೆ. ಬಳಿಕ ಪಾತ್ರಿ, ಉತ್ಸವ ಮೂರ್ತಿ ಹೊತ್ತವರು ಹಾಗೂ ನೀರಿನ ಬಿಂದಿಗೆ ಹೊತ್ತವರು ವಾದ್ಯೋಷಗಳೊಂದಿಗೆ ಮೆರವಣಿಗೆಯಲ್ಲಿ ಹೊರಡುತ್ತಾರೆ. ದೇವಸ್ಥಾನದ ಬಲಭಾಗದಿಂದ ಹೊರಡುವ ಮೆರವಣಿಗೆ ಕಾಶಿಪಟ್ಣ ಕೆರೆಯನ್ನು ದಾಟಿ ಸುಲಿಪಾದೆ ಏರುತ್ತದೆ. ಅಲ್ಲಿ ಕಲ್ಲಿನ ಮೇಲ್ಭಾಗದಲ್ಲಿ ಹರಿಯುವ ನೈಸರ್ಗಿಕ ಜಲಧಾರೆಯ ಬಳಿ ದೇವರನ್ನು ಇರಿಸಿ ಪೂಜೆ ನೆರವೇರಿಸಲಾಗುತ್ತದೆ.
ಮುಂದಿನ ಹಾದಿಯಲ್ಲಿ ಕಲ್ಲು-ಮುಳ್ಳು, ಗಿಡಗಂಟಿಗಳ ನಡುವೆ ಸುವಾರು ಮೂರು ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಿ ದಂಬೆದ ಕಾಡನ್ನು ತಲುಪಿ ಕಾನನದಲ್ಲಿ ಬಂಡೆಯ ತಳಭಾಗದಿಂದ ಹರಿಯುವ ಜಲಧಾರೆಯ ಬಳಿ ದೇವರನ್ನು ಇರಿಸಿ ಅಭಿಷೇಕ ಹಾಗೂ ಪೂಜೆ ನೆರವೇರಿಸಲಾಗುತ್ತದೆ. ಬಳಿಕ ಮೇಲ್ಭಾಗದ ಕಟ್ಟೆಯಲ್ಲಿ ದೇವರನ್ನು ಇರಿಸಿ ಪೂಜೆ ಸಲ್ಲಿಸಲಾಗುತ್ತದೆ. ದಂಬೆಯಿಂದ ತೀರ್ಥ ಬರುವುದರಿಂದ ಕಾಡಿಗೆ ದಂಬೆದ ಕಾಡು ಎಂಬ ಹೆಸರು ಬಂದಿದೆ ಎನ್ನುವ ಪ್ರತೀತಿ ಇದೆ. ಭಕ್ತರು ತೀರ್ಥಸ್ನಾನವನ್ನೂ ವಾಡುತ್ತಾರೆ.
ಮರಳುವ ದಾರಿಯ ಮೈಪುಲ್ದಪಲ್ಕೆ ಎಂಬಲ್ಲಿ ದೇವರನ್ನು ಇರಿಸಿ ಕಟ್ಟೆ ಪೂಜೆ ನೆರವೇರಿಸುವ ಸಂಪ್ರದಾಯವಿದೆ. ಅಲ್ಲಿಂದ ಮೆರವಣಿಗೆ ಮತ್ತೆ ಕಾಶಿಪಟ್ಣದ ಆದಿಶಕ್ತಿ ಅಮ್ಮನವರ ದೇವಸ್ಥಾನ ತಲುಪುತ್ತದೆ. ದೇವಸ್ಥಾನದ ಎದುರು ದೇವರು ಹಾಗೂ ಪಾತ್ರಿಯ ಭೇಟಿ ಬಳಿಕ ದೇವರನ್ನು ಗರ್ಭಗುಡಿಗೆ ಪ್ರವೇಶ ವಾಡಿಸಲಾಗುತ್ತದೆ.
ಈ ಆಚರಣೆಯಲ್ಲಿ ಗೊಲ್ಲ(ಯಾದವ) ಸಮುದಾಯದ ಒಂದು ಕುಟುಂಬ ತಲೆತಲಾಂತರಗಳಿಂದ ದೇವರ ಸೇವೆಗಳನ್ನು ನಿರ್ವಹಿಸುತ್ತಿದೆ. ಪೂಜೆ, ನರ್ತನ ಸೇವೆ, ಉತ್ಸವ ಮೂರ್ತಿಯನ್ನು ಹೊರುವುದು ಹಾಗೂ ಅಭಿಫಿೇಕದ ನೀರಿನ ಬಿಂದಿಗೆ ಹೊತ್ತು ಸಾಗಿಸುವ ಸೇವೆಯನ್ನು ಕುಟುಂಬದವರು ಮುಂದುವರಿಸಿಕೊಂಡು ಬಂದಿದ್ದಾರೆ. ಸಂಕ್ರಮಣ ಸೇರಿದಂತೆ ವಿಶೇಷ ದಿನಗಳಲ್ಲಿ ಬ್ರಾಹ್ಮಣರು ಪೂಜೆ ನೆರವೇರಿಸುತ್ತಾರೆ. ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸುತ್ತಾರೆ.
ಕಲ್ಲುಬಂಡೆಗಳಿಂದ ಆವೃತವಾದ ಗುಹಾಂತರ ದೇವಸ್ಥಾನದಲ್ಲಿ ದೇವರಿಗೆ ಸಾವಾನ್ಯವಾಗಿ ಪ್ರದಕ್ಷಿಣೆ ಹಾಕಲು ಸಾಧ್ಯವಾಗುವುದಿಲ್ಲ. ಆದರೆ ಕಾವೇರಿ ಸಂಕ್ರಮಣದಂದು ದೇವರು ದೇವಸ್ಥಾನದ ಬಲಭಾಗದಿಂದ ಹೊರಟು, ಕಾಡಿನ ನೈಸರ್ಗಿಕ ಜಲಧಾರೆಯಲ್ಲಿ ಜಳಕ ನೆರವೇರಿಸಿ, ಮತ್ತೊಂದು ಹಾದಿಯಲ್ಲಿ ಸಾಗಿ ಎಡಭಾಗದಿಂದ ಮರಳಿ ಸನ್ನಿಧಿ ಪ್ರವೇಶಿಸುತ್ತಾರೆ.