ನಮೋ ಕುಠೀರಕ್ಕೆ ಭೂಮಿಪೂಜೆ ನಡೆಯಿತು.  
ದಕ್ಷಿಣ ಕನ್ನಡ

ಕುರ್ನಾಡುವಿನಲ್ಲಿ 6ನೇ ನಮೋ ಕುಟೀರ : ಬಿಜೆಪಿ ಮುಖಂಡನಿಂದ ಸ್ವಂತ ಖರ್ಚಿನಲ್ಲಿ ವೃದ್ಧರಿಗೆ ಸೂರು

ಸಮಾಜದಲ್ಲಿ ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬಕ್ಕೆ ಮನೆ ನಿರ್ಮಾಣ ಮಾಡುವ ಅವಕಾಶ ಸಿಗುವುದೇ ಪುಣ್ಯ. ದೇವರು, ಹಿರಿಯರ ಆಶೀರ್ವಾದದಿಂದ ಆರನೇ ಮನೆ ನಿರ್ಮಾಣ ಆಗಲಿದ್ದು ವೃದ್ಧ ದಂಪತಿಯ ಮುಖದಲ್ಲಿನ ನಗು ನೆಮ್ಮದಿ ನೀಡಿದೆ.

ಗುರುನಾನಕರ ಜನ್ಮದಿನದಂದು ಸರ್ವಜನಾಂಗದ ಉಪಸ್ಥಿತಿಯಲ್ಲಿ ಹಿರಿಯ ದಂಪತಿಗೆ ಮನೆ ನಿರ್ಮಾಣ ಕಾರ್ಯ ಧರ್ಮದ ಕಾರ್ಯ. ಎಲ್ಲ ಜಾತಿ, ಧರ್ಮ, ಪಕ್ಷ ಮೀರಿ ಜನ ಸೇರಿದ್ದಾರೆ. ಮನೆ ಕಟ್ಟುವುದಕ್ಕಿಂತ ಮನಸ್ಸು ಕಟ್ಟುವ ಕಾರ್ಯ ನಡೆದಿದೆ. ಅಸಹಾಯಕ ಕುಟುಂಬಕ್ಕೆ ಬೆಳಕು ನೀಡಿದಂತಾಗಿದೆ.ಶೀನ ಶೆಟ್ಟಿ ಜನಶಿಕ್ಷಣ ಟ್ರಸ್ಟ್ ನಿರ್ದೇಶಕ