ಸಾಂದರ್ಭಿಕ ಚಿತ್ರ 
ದಕ್ಷಿಣ ಕನ್ನಡ

ಗಾಂಜಾ ಸಾಗಾಟ ಅಪರಾಧಿಗೆ 6 ತಿಂಗಳು ಕಠಿಣ ಜೈಲು

ಮಂಗಳೂರು: ಗಾಂಜಾ ಸಾಗಾಟ ಪ್ರಕರಣದ ಅಪರಾಧಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎ್ಟಿಎಸ್‌ಸಿ-1) ತ್ವರಿತ ನ್ಯಾಯಾಲಯ 6 ತಿಂಗಳುಗಳ ಕಾಲ ಕಠಿಣ ಜೈಲು ಶಿಕ್ಷೆ ಮತ್ತು 10ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಲಕ್ಷದ್ವೀಪ ಕಿಲ್ತಾನ್ ಐಲ್ಯಾಂಡ್ ನಿವಾಸಿ ಸಲಾಹುದ್ದೀನ್ (28) ಶಿಕ್ಷೆಗೊಳಗಾದ ಅಪರಾಧಿ.
ಕಸಬಾ ಗ್ರಾಮದ ಹಳೇ ಬಂದರು ಧಕ್ಕೆಯಲ್ಲಿ 2020ರ ಜ.30ರಂದು ಅಕ್ರಮವಾಗಿ ಮಾದಕ ದ್ರವ್ಯ ಗಾಂಜಾವನ್ನು ವಶದಲ್ಲಿಟ್ಟುಕೊಂಡು ಹಡಗಿನಲ್ಲಿ ಪ್ರಯಾಣಿಸಲು ಪ್ರಯತ್ನಿಸುವಾಗ ಈತನ ಬ್ಯಾಗಿನಲ್ಲಿದ್ದ 100ಗ್ರಾಂ ಗಾಂಜಾವನ್ನು ಕರಾವಳಿ ಕಾವಲು ಪಡೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿ 3ನೇ ಜೆಎಂಎ್ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿಯನ್ನು ಬಿಡುಗಡೆಗೊಳಿಸಲಾಗಿತ್ತು. ಸದ್ರಿ ಆದೇಶದ ವಿರುದ್ಧ ಅಭಿಯೋಜನೆ ಮೇಲ್ಮನವಿ ಸಲ್ಲಿಸಿದ್ದು, ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎ್ಟಿಎಸ್‌ಸಿ-1 ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿತ್ತು. ನ್ಯಾಯಾಲಯವು ಅಭಿಯೋಜನೆಯ ಹಾಗೂ ಆರೋಪಿ ಪರ ವಾದ ಪ್ರತಿ ವಾದವನ್ನು ಆಲಿಸಿ ಈತನ ವಿರುದ್ಧ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ವಿಚಾರಣೆ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿದೆ. ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎ್ಟಿಎಸ್‌ಸಿ1 ತ್ವರಿತ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ ಮೋಹನ್ ಜೆ.ಎಸ್. ಅಪರಾಧಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ.
ಎನ್‌ಡಿಪಿಎಸ್ ಕಾಯಿದೆ ಕಲಂ 8(ಸಿ) ಮತ್ತು 20 (ಬಿ) (ಐಐ) (ಎ) ಪ್ರಕಾರ 6 ತಿಂಗಳುಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ. ಬದರಿನಾಥ ನಾಯರಿ ಮೇಲ್ಮನವಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.