ಮಂಗಳೂರು: ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಶುಕ್ರವಾರ ಬೆಳಗ್ಗಿನ ಜಾವ ಕೊಲೆಯಾದ ರೌಡಿಶೀಟರ್ ಕಿನ್ಯ ಅಜ್ಜಿನಡ್ಕ ನಿವಾಸಿ ಆರ್ಿ ಹುಸೇನ್ ಯಾನೆ ಟ್ಯಾಬ್ಲೆಟ್ ಆರಿಫ್ (40) ಎಂಬಾತನ ಕೊಲೆ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಆರೋಪಿಗಳ ಪತ್ತೆಗೆ ಪ್ರತ್ಯೇಕ 4 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
ಕೊಲೆ ಕೃತ್ಯ ನಡೆದ ಕೂಡಲೇ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಕಾನೂನು ಸುವ್ಯವಸ್ಥಾ ವಿಭಾಗದ ಡಿಸಿಪಿ ಮಿಥುನ್ ಅವರ ಮಾರ್ಗದರ್ಶನದಲ್ಲಿ ಅಪರಾಧ ಪತ್ತೆದಳ (ಸಿಸಿಬಿ), ದಕ್ಷಿಣ ಉಪವಲಯದ 2 ತಂಡ ಹಾಗೂ ಪ್ರತ್ಯೇಕ ಇನ್ನೊಂದು ತಂಡ ರಚಿಸಿ ಆರೋಪಿಗಳ ಪತ್ತೆಗೆ ನಿರ್ದೇಶನ ನೀಡಿದ್ದಾರೆ. ಆರೋಪಿಗಳ ಬಗ್ಗೆ ಸ್ಪಷ್ಟ ಸುಳಿವು ಸಿಕ್ಕಿದ್ದು, ಶೋಧ ಕಾರ್ಯ ಮುಂದುವರಿದಿದೆ.
ಪ್ರಕರಣ ವಿವರ: ಆರ್ೀ ಮಂಗಳೂರಿನ ಧಕ್ಕೆಯಲ್ಲಿ ಮೀನು ವ್ಯಾಪಾರ ನಡೆಸುತ್ತಿದ್ದು, ಶುಕ್ರವಾರ ಮುಂಜಾನೆ 3.30ರ ಸುಮಾರಿಗೆ ಬುಲೆಟ್ ಬೈಕ್‌ನಲ್ಲಿ ಧಕ್ಕೆಗೆ ತೆರಳುತ್ತಿದ್ದ. ಈ ಸಂದರ್ಭ ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ದುಷ್ಕರ್ಮಿಗಳು ಕೇರಳ ನೋಂದಣಿಯ ಕಾರನ್ನು ಬುಲೆಟ್‌ಗೆ ಡಿಕ್ಕಿ ಹೊಡೆಸಿ, ಆತ ರಸ್ತೆಗೆ ಬೀಳುತ್ತಿದ್ದಂತೆ ಮಾರಕಾಸಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.
* ನೌಲ್ ಗ್ಯಾಂಗ್‌ನದ್ದೇ ಕೃತ್ಯ?: ನೌಲ್ ಮತ್ತು ಆರ್ೀಗೂ ವೈಮನಸ್ಸಿದ್ದು ಕೆಲವೊಂದು ವಿಚಾರದಲ್ಲಿ ಈ ಹಿಂದೆ ಗಲಾಟೆಯಾಗಿತ್ತು. 2022ರಲ್ಲಿ ಉಚ್ಚಿಲ ಸೇತುವೆ ಸಮೀಪ ಆರ್ೀ ಬುಲೆಟ್‌ನಲಿ ಬರುತ್ತಿದ್ದಾಗ ತಂಡವೊಂದು ದಾಳಿ ಮಾಡಿ ಕೊಲೆಗೆ ಯತ್ನಿಸಿತ್ತು. ಈ ಸಂದರ್ಭ ಆರ್ೀ ಓಡಿ ತಪ್ಪಿಸಿಕೊಂಡು ಪಾರಾಗಿದ್ದ. ಈ ಪ್ರಕರಣದಲ್ಲಿ ನೌಾಲ್ ಹಾಗೂ ಸಹಚರರನ್ನು ಪೊಲೀಸರು ಬಂಧಿಸಿದ್ದರು. ಡ್ರಗ್ಸ್ ಸಾಗಾಟವನ್ನೇ ವೃತ್ತಿಯನ್ನಾಗಿಸಿದ ನೌಲ್ 2025ರ ನವೆಂಬರ್‌ನಲ್ಲಿ ಉಪ್ಪಳಕ್ಕೆ ಹೋಗಿದ್ದಾಗ ರೈಲು ಡಿಕ್ಕಿ ಹೊಡೆದಂತೆ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದ. ಮೃತದೇಹ ನೋಡಿದಾಗ ಯಾರೋ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆರ್ೀ ಮೇಲೆ ಅನುಮಾನ ವ್ಯಕ್ತವಾಗಿತ್ತು. ಆರ್ೀ ಕೊಲೆ ಕೃತ್ಯಕ್ಕೆ ಬಳಸಿದ್ದ ಕೇರಳ ನೋಂದಣಿಯ ಇನೋವಾ ಕಾರಿನಲ್ಲಿ 6ಮಂದಿ ಇದ್ದ ಬಗ್ಗೆ ಮಾಹಿತಿ ಲಭಿಸಿದ್ದು, ಈ ಕೃತ್ಯದ ಹಿಂದೆ ನೌಲ್ ಗ್ಯಾಂಗ್‌ನ ಕೃತ್ಯದ ಅನುಮಾನ ಹೆಚ್ಚಿದೆ. ಕಾರು ವಿಟ್ಲ ಠಾಣಾ ವ್ಯಾಪ್ತಿಯ ಬುಡೋಳಿಯಲ್ಲಿ ಪತ್ತೆಯಾಗಿದೆ. ಅಲ್ಲಿಂದ ಬೇರೊಂದು ಕಾರಿನಲ್ಲಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳ ಬಂಧನದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.