ganja case 
ದಕ್ಷಿಣ ಕನ್ನಡ

ಕಾಞಂಗಾಡು ರೈಲ್ವೆ ನಿಲ್ದಾಣದಲ್ಲಿ 4 ಕಿ.ಗ್ರಾಂ. ಗಾಂಜಾ ವಶ

ಎನ್‌ಡಿಪಿಎಸ್ ಅನ್ವಯ ಕೇಸು ದಾಖಲು

ಕಾಸರಗೋಡು: ಕಾಞಂಗಾಡು ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಅಕ್ರಮವಾಗಿ ಇರಿಸಲಾಗಿದ್ದ ನಾಲ್ಕು ಕೆ.ಜಿ. ಗಾಂಜಾವನ್ನು ಅಬಕಾರಿ ಹಾಗೂ ರೈಲ್ವೆ ರಕ್ಷಣಾ ಪಡೆ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಳ್ಳಲಾಗಿದೆ.

ಹೊಸದುರ್ಗ ಅಬಕಾರಿ ವೃತ್ತ ಕಚೇರಿ, ಕಾಸರಗೋಡು ಜಿಲ್ಲಾ ಮಾದಕವಸ್ತು ನಿಗ್ರಹದಳ ಹಾಗೂ ಆರ್‌ಪಿಎಫ್ ಅಧಿಕಾರಿಗಳು ಜಂಟಿಯಾಗಿ ತಪಾಸಣೆ ನಡೆಸಿದ ಸಂದರ್ಭ ಗಾಂಜಾ ಪತ್ತೆಯಾಗಿದೆ. ಆರೋಪಿಗಳ ಪತ್ತೆಯಾಗಿಲ್ಲ. ಹೊಸದುರ್ಗ ಅಬಕಾರಿ ಇನ್‌ಸ್ಪೆಕ್ಟರ್ ಪ್ರಸನ್ನಕುಮಾರ್ ವಿ.ವಿ. ನೇತೃತ್ವದ ತಂಡ ಗಾಂಜಾ ವಶಪಡಿಸಿಕೊಂಡು ಎನ್‌ಡಿಪಿಎಸ್ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ.