ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮವನ್ನು ವೇಣೂರು ಠಾಣಾ ಸಬ್ ಇನ್‌ಸ್ಪೆಕ್ಟರ್ ಒಮನ ಎನ್.ಕೆ. ಉದ್ಘಾಟಿಸಿದರು. ಪ್ರಮುಖರಾದ ದಿನೀಶ್ ಡಿ., ಮನೋಹರ್ ಬಳಂಜ, ಅಶ್ವಿನಿ ಮೂಡುಬಿದಿರೆ ಮೊದಲಾದವರಿದ್ದರು. 
ದಕ್ಷಿಣ ಕನ್ನಡ

ಧರ್ಮಸ್ಥಳ ಯೋಜನೆಯಿಂದ ಆರ್ಥಿಕ ಸ್ವಾವಲಂಬನೆ : ಒಮನಾ ಎನ್.ಕೆ.

ಕುಕ್ಕೇಡಿ ಅಂಬೇಡ್ಕರ್ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಗುರುವಾಯನಕೆರೆ ಗರ್ಡಾಡಿ ವಲಯದ ಮಹಿಳಾ ಜ್ಞಾನವಿಕಾಸದ ವಾರ್ಷಿಕೋತ್ಸವ ಮತ್ತು ತಾಲೂಕಿನ ಸ್ವಸಹಾಯ ಸಂಘ, ಪ್ರಗತಿ ಬಂದು ತಂಡಕ್ಕೆ 2002 ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮ ಉದ್ದಾಟಿಸಿ ಶನಿವಾರ ಮಾತನಾಡಿದರು.
ದ.ಕ. ಜಿಲ್ಲಾ ಧ.ಗ್ರಾ. ಯೋಜನೆ ನಿರ್ದೇಶಕ ದಿನೀಶ್ ಡಿ., ಬೆಳ್ತಂಗಡಿ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮನೋಹರ್ ಬಳಂಜ, ವಕೀಲೆ ಅಶ್ವಿನಿ ಮೂಡುಬಿದಿರೆ ಮಾತನಾಡಿದರು.
ಕುಕ್ಕೇಡಿ ಗ್ರಾಪಂ ಅಧ್ಯಕ್ಷೆ ಅನಿತಾ ಅಧ್ಯಕ್ಷತೆ ವಹಿಸಿದ್ದರು. ವೇಣೂರು ಗ್ರಾಪಂ ಮಾಜಿ ಉಪಾಧ್ಯಕ್ಷರ ಅಶೋಕ್ ಪಾಣೂರು, ಗರ್ಡಾಡಿ ವಲಯ ಪ್ರಗತಿ ಸ್ವ-ಸಹಾಯ ಸಂಘ- ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ವರದರಾಜ್ ಉಪಸ್ಥಿತರಿದ್ದರು. ಗುರುವಾಯನಕೆರೆ ವಲಯ ಯೋಜನಾಧಿಕಾರಿ ಅಶೋಕ್ ಬಿ. ಸ್ವಾಗತಿಸಿದರು. ಜಗನ್ನಾಥ್ ಮತ್ತು ಸುಗುಣಾ ಶೆಟ್ಟಿ ನಿರೂಪಿಸಿದರು. ವಲಯ ಮೇಲ್ವಿಚಾರಕಿ ಹೇಮಾವತಿ ವಂದಿಸಿದರು.

ಹಿರಿಯ ಸದಸ್ಯರಿಗೆ ಸನ್ಮಾನ