ಮಂಗಳೂರು:ದ.ಕ.ಜಿಲ್ಲೆಯವಿವಿಧ ಬ್ಯಾಂಕ್‌ಗಳಲ್ಲಿ 10ವರ್ಷಹಳೆಯ ವಹಿವಾಟು ರಹಿತ ಖಾತೆಗಳಲ್ಲಿಸುಮಾರು 140ಕೋಟಿರೂ.ಗಳಿದ್ದು,ಅದನ್ನುಸಂಬಂಧಪಟ್ಟ ಗ್ರಾಹಕರು ಪಡೆದುಕೊಳ್ಳುವಲ್ಲಿಬ್ಯಾಂಕ್‌ಗಳು ಜಾಗೃತಿ ಮೂಡಿಸಬೇಕುಎಂದು ಸಂಸದ ಕ್ಯಾ.ಬ್ರಿಜೇಶ್ಚೌಟ ಹೇಳಿದರು.
ದ.ಕ.ಜಿಲ್ಲಾಲೀಡ್ ಬ್ಯಾಂಕ್ ತಿಯಿಂದ ದ.ಕ.ಜಿಲಾಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿಬುಧವಾರ ನಡೆದ ಜಿಲ್ಲಾ ಸಮಾಲೋಚನಾಸಮಿತಿ (ಡಿಸಿಸಿ)ಮತ್ತುಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ(ಡಿಎಲ್‌ಆರ್‌ಸಿ)ಸಭೆಯಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದವಿವಿಧ ಬ್ಯಾಂಕ್‌ಗಳಲ್ಲಿ 10ವರ್ಷಮೇಲ್ಪಟ್ಟು ನಿಷ್ಕ್ರಿಯವಾಗಿರುವಬ್ಯಾಂಕ್ ಖಾತೆಗಳಲ್ಲಿ ಒಟ್ಟು78000ಕೋಟಿರೂ.ಠೇವಣಿಇದೆ.ಕರ್ನಾಟಕದಲ್ಲಿಇದು 3400ಕೋಟಿರೂ.ಗಳಾಗಿದ್ದು,ದ.ಕ.ಜಿಲ್ಲೆಯಲ್ಲಿ140ಕೋಟಿರೂ.ಇದೆ.ಇದಲ್ಲದೆಇನ್ಸೂರೆನ್ಸ್,ಶೇರ್‌ಗಳುಕೂಡಾ ಇದ್ದು ಇವಗಳನ್ನು ಗ್ರಾಹಕರಿಗೆಹಿಂತಿರುಗಿಸಲು ಸೂಕ್ತ ಕ್ರಮಗಳನ್ನುವಹಿಸಬೇಕು ಎಂದರು.
ದ.ಕ.ಜಿಲ್ಲೆಯಲ್ಲಿಈಗಾಗಲೇ ಇಂತಹ ನಿಷ್ಕ್ರಿಯವಾಗಿದ್ದಖಾತೆಗಳ 20ಕೋಟಿರೂ.ಗಳನ್ನುಗ್ರಾಹಕರಿಗೆ ಪಾವತಿಸಲಾಗಿದೆ.ಉದ್ಗಮ್ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಂಡುಗ್ರಾಹಕರು ತಮ್ಮ ಹೆಸರು,ಪಾನ್ಅಥವಾ ಜನ್ಮ ದಿನಾಂಖದ ಮೂಲಕ ತಮ್ಮನಿಷ್ಕ್ರಿಯ ಖಾತೆಗಳನ್ನುಪತ್ತೆಹಚ್ಚಬಹುದು.ಬಳಿಕಸಂಬಂಧಪಟ್ಟ ಬ್ಯಾಂಕ್‌ಗೆ ಕೆವೈಸಿದಾಖಲೆಗಲನ್ನು ಒದಗಿಸಿ ಹಣ ಪಡೆಯಯಲುಆರ್‌ಬಿಐ ಈಗಾಗಲೇ ನಿರ್ದೇಶನನೀಡಿದೆ ಎಂದು ಆರ್‌ಬಿಐ ಎಜಿಎಂಅರುಣ್ ಕುಮಾರ್ ಪಿ.ತಿಳಿಸಿದರು.
ಪಿಎಂವಿಶ್ವಕರ್ಮ ಯೋಜನೆಗೆ ಸಂಬಂಧಿಸಿಕೆಲವೊಂದು ಬ್ಯಾಂಕ್‌ಗಳವರುಆಯ್ಕೆಯಾದ ಫಲಾನುವಿಗಳಿಗೆ ಹಣಮಂಜೂರಾತಿ ಮಾಡದಿರುವ ಬಗ್ಗೆಸಂಸದರು ಅಸಮಾಧಾನ ವ್ಯಕ್ತಪಡಿಸಿದರು.ಕಿಸಾನ್ಕ್ರೆಡಿಟ್ ಕಾರ್ಡ್‌ಗಳ ವಿತರಣೆಯಕುರಿತಂತೆ ಮಾಹಿತಿ ಪಡೆದ ಅವರು,ಸರ್ಕಾರವಿವಿಧ ಯೋಜನೆಗಳಾದ ಪಿಎಂಜೆಜೆವೈ,ಪಿಎಂಎಸ್‌ಬಿವೈ,ಪಿಎಂಜೆಡಿವೈಎಪಿವೈ (ಅಟಲ್ಪಿಂಚಣಿ ಯೋಜನೆ)ಬಗ್ಗೆಬ್ಯಾಂಕ್‌ಗಳು ಹೆಚ್ಚಿನ ಆಸಕ್ತಿವಹಿಸುವಂತೆ ನಿರ್ದೇಶನ ನೀಡಿದರು.
ಪಿಎಂಸ್ವ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿಪ್ರಥಮ ಕಂತಿನಲ್ಲಿ 12913,ದ್ವಿತೀಯಕಂತಿನಲ್ಲಿ 4854ಹಾಗೂತೃತೀಯ ಕಂತಿನಲ್ಲಿ 1667ಮಂದಿಗೆಹಣ ಮಂಜೂರಾಗಿದೆ.ಸೆಪ್ಟಂಬರ್ಅತ್ಯಂಕ್ಕೆ ಜಿಲ್ಲೆಯ ಬ್ಯಾಂಕ್‌ಗಳಒಟ್ಟು ವ್ಯವಹಾರ 135696.22ಕೋಟಿರೂ.ಗಳಾಗಿದೆ.ಆದ್ಯತಮತ್ತು ಅದ್ಯತೆಯೇತರ ವಲಯಗಳಲ್ಲಿಒಟ್ಟು 26096.15ಕೋಟಿರೂ.ಸಾಲವಿತರಿಸಲಾಗಿದ್ದು,ತ್ರೈಮಾಸಿಕಗುರಿಯ ಶೇ 80.90ರಷ್ಟುಸಾಧನೆಯಾಗಿದೆ.ಕೃಷಿಕ್ಷೇತ್ರಕ್ಕೆ 6664.51ಕೋಟಿರೂ.ವಿತರಣೆಯಾಗಿದೆಎಂದು ಕವಿತಾ ಶೆಟ್ಟಿ ವಿವರ ನೀಡಿದರು.
ಕೆನರಾಬ್ಯಾಂಕ್‌ನ ಡಿಜಿಎಂ ಶೈಲೇಂದ್ರನಾಥ್,ನಬಾರ್ಡ್ಡಿಡಿಎಂ ಸಂಗೀತ ಎಸ್.ಕರ್ತಮತ್ತಿತರರು ಉಪಸ್ಥಿತರಿದ್ದರು.
ಮುದ್ರಾಯೋಜನೆಯಡಿ 2025ರಎಪ್ರಿಲ್‌ನಿಂದ ಸೆಪ್ಟಂಬರ್‌ವರೆಗೆ414.26ಕೋಟಿರೂ.ಸಾಲವಿತರಿಸಲಾಗಿದೆ.ಪ್ರಧಾನಮಂತ್ರಿಜನಧನ್ ಯೋಜನೆಯಡಿ 20769ಉಳಿತಾಯಖಾತೆ ತೆರೆಯಲಾಗಿದೆ.ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾಯೋಜನೆಯಡಿ 25,564ಮಂದಿನೋಂದಣಿಯಾಗಿದ್ದಾರೆ.ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ52239ಮಂದಿಯನ್ನುನೋಂದಣೆ ಮಾಡಲಾಗಿದೆ.ಅಟಲ್ಪಿಂಚಣಿ ಯೋಜನೆಯಡಿ 16668ಮಂದಿಯನ್ನುನೋಂದಣೆ ಮಾಡಿರುವುದಾಗಿ ಕವಿತಾ ಶೆಟ್ಟಿಮಾಹಿತಿ ನೀಡಿದರು.