ಕುಂದಾಪುರ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕುಂದಾಪುರ ತಾಲೂಕಿನ ಹಂಗಳೂರು ನಿವಾಸಿ ಎನ್.ಕೃಷ್ಣಮೂರ್ತಿ ಶೇಟ್ ಅವರ ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ ಹಾಗೂ ನಗದನ್ನು ದೋಚಿದ ಘಟನೆ ನಡೆದಿದೆ.
ಕೃಷ್ಣಮೂರ್ತಿ ಅವರು ಬೆಂಗಳೂರಿನ ಜ್ಯುವೆಲ್ಲರಿಯಲ್ಲಿ 10 ಕೆಜಿ ತೂಕದ ತಲಾ ಎರಡು ಪ್ಯಾಕೇಟ್ ಬೆಳ್ಳಿಯ ಗಟ್ಟಿಯನ್ನು ಖರೀದಿಸಿ ಪತ್ನಿಯೊಂದಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕುಂದಾಪುರಕ್ಕೆ ಪ್ರಯಾಣಿಸುತ್ತಿದ್ದರು. ಒಂದು ಪ್ಯಾಕೇಟನ್ನು ಚೀಲದಲ್ಲಿ ಹಾಕಿ ಕಾಲಿನಡಿ ಇಟ್ಟುಕೊಂಡಿದ್ದರು.
ಇನ್ನೊಂದು ಬೆಳ್ಳಿ ಗಟ್ಟಿಯ ಪ್ಯಾಕೇಟ್ ಹಾಗೂ 3 ಲಕ್ಷ ರೂ. ನಗದನ್ನು ಮತ್ತೊಂದು ಬ್ಯಾಗ್‌ನಲ್ಲಿ ಹಾಕಿ ಸೀಟ್ ಮೇಲ್ಬಾಗದ ಲೆಗೇಜ್ ಕಂಪಾರ್ಟ್‌ಮೆಂಟ್‌ನಲ್ಲಿ ಇಟ್ಟಿದ್ದರು. ಮರುದಿನ ಬೆಳಗ್ಗೆ ನೋಡುವಾಗ ಲಗೇಜ್ ಕಂಪಾರ್ಟ್‌ಮೆಂಟ್‌ನಲ್ಲಿಟ್ಟಿದ್ದ ಬ್ಯಾಗ್‌ನ ಜಿಪ್ ತೆರೆದಿದ್ದು ಬೆಳ್ಳಿ ಹಾಗೂ ನಗದು ಕಳವಾಗಿತ್ತು. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.