ಪೆರಿಯಡ್ಕದಲ್ಲಿ ರಸ್ತೆ ಹೊಂಡಕ್ಕೆ ತುಂಬಿಸಿದ ಮಣ್ಣು ತೆಗೆಯುತ್ತಿರುವುದು. 
ದಕ್ಷಿಣ ಕನ್ನಡ

ಪೆರಿಯಡ್ಕದಲ್ಲಿ ಗುಂಡಿಗೆ ಹಾಕಿದ್ದ ಮಣ್ಣು ತೆರವು : ಉಪ್ಪಿನಂಗಡಿ ಹಳೆಗೇಟು- ಮರ್ಧಾಳ ರಾಜ್ಯ ಹೆದ್ದಾರಿ ಹೊಂಡಮಯ

ಗುತ್ತಿಗೆದಾರರಿಗೆ ತೇಪೆ ಕಾರ್ಯ ಮಾಡಲು ಹೇಳಲಾಗಿದೆ. ಹೊಂಡಗಳಿಗೆ ಮಣ್ಣು ಹಾಕಲು ಅಲ್ಲ. ಈ ವಿಷಯ ಗಮನಕ್ಕೆ ಬಂದ ಕೂಡಲೇ ತೆರವಿಗೆ ಸೂಚಿಸಿದ್ದೇವೆ.

ರಸ್ತೆ ಹೊಂಡಕ್ಕೆ ಡಾಂಬರು ಮೂಲಕ ತೇಪೆ ಹಚ್ಚಲು ಇಲಾಖೆ ಹೇಳಿದೆ. ಆದರೆ ಮಳೆ ಕಾರಣ ನಾವೀಗ ಇಲ್ಲಿ ಮಣ್ಣು ತುಂಬಿಸಿದ್ದೇವೆ. ಜನಾಕ್ರೋಶದ ಕಾರಣಕ್ಕೆ ಅದನ್ನೀಗ ತೆಗೆದಿದ್ದೇವೆ. ಮುಂದಿನ ಸೋಮವಾರ ಡಾಂಬರು ಹಾಕಿ ಹೊಂಡ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಪ್ರಾರಂಭಿಸುತ್ತೇವೆ.

ಹೊಂಡ ಗುಂಡಿಗಳಿಗೆ ರಸ್ತೆ ಬದಿಯ ಮಣ್ಣನ್ನು ಸರ್ಕಾರ ಹಾಕುವುದಾದರೆ ಅದನ್ನು ಸಾರ್ವಜನಿಕರಾದ ನಾವೇ ಮಾಡುತ್ತೇವೆ. ಕಾಟಾಚಾರಕ್ಕೆ ಕಾಮಗಾರಿ ಬೇಡ. ಮಣ್ಣು ಹಾಕಿದರೆ ಇನ್ನಷ್ಟು ಸಮಸ್ಯೆಗಳಿಗೆ ಇದು ಕಾರಣವಾಗುತ್ತದೆ. ಆದ್ದರಿಂದ ಒಂದೋ ಹೊಂಡ ಗುಂಡಿಗಳಿಗೆ ಕ್ರಮಬದ್ಧವಾಗಿ ಡಾಂಬರು ಅಥವಾ ಕಾಂಕ್ರೀಟ್ ಮೂಲಕ ತೇಪೆ ಹಾಕಬೇಕು.