ಹಳೆಯಂಗಡಿ ಸೀವಾಕ್ ರನ್ ಓಟಕ್ಕೆ ಕಟೀಲು ದುರ್ಗಾ ಸಂಜೀವಿನಿ ಆಸ್ಪತ್ರೆ ಆಡಳಿತ ಅಧಿಕಾರಿ ಡಾ.ಶಿವಾನಂದ ಪ್ರಭು ಹಾಗೂ ಯುವ ಉದ್ಯಮಿ ರಾಹುಲ್ ಕರ್ಕಡ ಚಾಲನೆ ನೀಡಿದರು. 
ದಕ್ಷಿಣ ಕನ್ನಡ

ಶಿಕ್ಷಣ, ಕ್ರೀಡೆಯಿಂದ ಯುವಜನತೆಯ ಸಾಧನೆ : ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅಭಿಪ್ರಾಯ

ಸೌಮ್ಯ ಆರ್


ಹಳೆಯಂಗಡಿ: ಯುವಜನತೆ ಸಾಮಾಜಿಕ ಜಾಲತಾಣಗಳಿಂದ ಅಂತರ ಕಾಯ್ದುಕೊಂಡು ಶಿಕ್ಷಣ ಹಾಗೂ ಕ್ರೀಡೆಗೆ ಮಹತ್ವ ನೀಡಿ ಜೀವನದಲ್ಲಿ ಸಾಧಕರಾಗಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.

ಶ್ರೀ ವಿದ್ಯಾವಿನಾಯಕ ಯುವಕ ಮಂಡಲ, ರಜತ ಸೇವಾ ಟ್ರಸ್ಟ್, ಯುವತಿ ಮತ್ತು ಮಹಿಳಾ ಮಂಡಲ ಹಾಗೂ ಸುರತ್ಕಲ್ ಬೀಚ್ ರನ್ನರ್ಸ್ ಸಹಯೋಗದೊಂದಿಗೆ ಹಳೆಯಂಗಡಿ ಸೀವಾಕ್ ರನ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಟೀಲು ದುರ್ಗಾ ಸಂಜೀವಿನಿ ಆಸ್ಪತ್ರೆ ಆಡಳಿತ ಅಧಿಕಾರಿ ಡಾ.ಶಿವಾನಂದ ಪ್ರಭು ಹಾಗೂ ಯುವ ಉದ್ಯಮಿ ರಾಹುಲ್ ಕರ್ಕಡ ಓಟಕ್ಕೆ ಚಾಲನೆ ನೀಡಿದರು.

ದ.ಕ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ, ಮೈ ಭಾರತ್‌ನ ಯುವ ಸಮನ್ವಯ ಅಧಿಕಾರಿ ಉಲ್ಲಾಸ್ ಕೆ.ಟಿ.ಕೆ., ಜಿಲ್ಲಾ ಯುವ ಸಮನ್ವಯ ಅಧಿಕಾರಿ ಎ.ಒ.ಜಗದೀಶ್ ಕೆ., ಹಳೆಯಂಗಡಿ ಪಿಡಿಒ ಅರುಣ್ ಪ್ರದೀಪ್ ಡಿಸೋಜ, ಸುರತ್ಕಲ್ ಬೀಚ್ ರನ್ನರ್ಸ್ ಅಧ್ಯಕ್ಷ ವಿಲ್‌ವಿನ್ ಕೌಂಡ್ಸ್, ಶ್ರೀ ವಿದ್ಯಾವಿನಾಯಕ ಯುವಕ ಮಂಡಲ ಅಧ್ಯಕ್ಷ ಕಿರಣ್ ರಾಜ್ ಬಿ., ರಜತ ಸೇವಾ ಟ್ರಸ್ಟ್ ಕಾರ್ಯದರ್ಶಿ ಸ್ಟಾೃನಿ ಡಿಕೋಸ್ತ, ಕಾರ್ಯದರ್ಶಿ, ಸಲಹಾ ಸಮಿತಿ ಅಧ್ಯಕ್ಷ ನಾಗರಾಜ್, ಯುವತಿ ಮಂಡಲ ಅಧ್ಯಕ್ಷೆ ನಿರ್ಮಿತ, ಮಹಿಳಾ ಮಂಡಲ ಕಾರ್ಯದರ್ಶಿ ಪ್ರೇಮಲತಾ, ಜಂಟಿ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.