ಸಾಂದರ್ಭಿಕ ಚಿತ್ರ  
ದಕ್ಷಿಣ ಕನ್ನಡ

ಮಗುವಿನ ಕತ್ತಿನಿಂದ ಚಿನ್ನದ ಸರ ಕಳವು

ಕುಂಬಳೆ ನಿವಾಸಿ ದಯಾನಂದ ಆಚಾರ್ಯ ಅವರ ಪತ್ನಿ ಅಶ್ವಿನಿ ತನ್ನ ಮೂರು ವರ್ಷದ ಪುತ್ರಿ ಮಿಷಿತಾ ಅವರೊಂದಿಗೆ ಕಾಸರಗೊಡು ಚೌಕಿ ತೆರಳಲು ಕುಂಬಳೆಯಿಂದ ಬಸ್ಸನ್ನೇರಿದ್ದರು. ಬಸ್ ಚೌಕಿ ತಲುಪುತ್ತಿದ್ದಂತೆ ಮಗುವಿನ ಕತ್ತಿನಲ್ಲಿದ್ದ ನಾಲ್ಕು ಗ್ರಾಂ ತೂಕದ ಚಿನ್ನದ ಸರ ಕಾಣೆಯಾಗಿತ್ತು. ಈ ಬಗ್ಗೆ ಬಸ್‌ನ ನಿರ್ವಾಹಕರಲ್ಲಿ ಮಾಹಿತಿ ನೀಡಿದ್ದು, ಹುಡುಕಾಟದ ಮಧ್ಯೆ ಚೈನಿನ ಕೊಳಿಕೆ ಭಾಗ ಮಾತ್ರ ಬಸ್ಸಿನೊಳಗೆ ಲಭಿಸಿದೆ. ಅಶ್ವಿನಿ ನೀಡಿದ ದೂರಿನನ್ವಯ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.