ಉಡಾನ್-ಅಂತರ ಕಾಲೇಜು ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಕುಳಾಯಿ ಎಂ.ಡಿ.ಎಸ್ ಪಪೂ ಕಾಲೇಜು, ಸಮಗ್ರ ಪ್ರಶಸ್ತಿ ಪಡೆಯಿತು. 
ದಕ್ಷಿಣ ಕನ್ನಡ

ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಚಟುವಟಿಕೆ ಪೂರಕ : ಡಾ.ವಾಸುದೇವ ಬೆಳ್ಳೆ ಅನಿಸಿಕೆ

ಹಳೆಯಂಗಡಿ: ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನ, ಕೌಶಲ ವೃದ್ಧಿಗೆ ಪೂರಕ. ಜೀವನೋನ್ನತಿಯಲ್ಲಿ ಗಗನದ ಎತ್ತರಕ್ಕೆ ಹಾರು ಎನ್ನುವ ಆಶಯ ಉತ್ತಮವಾಗಿದ್ದು, ವಿದ್ಯಾರ್ಥಿಗಳ ಮುಂದಿರುವ ಅನಂತ ಸಾಧ್ಯತೆಗಳನ್ನು ಸಂಕೇತಿಸುತ್ತದೆ ಎಂದು ಮೂಲ್ಕಿ ಸರ್ಕಾರಿ ಪಪೂ ಕಾಲೇಜು ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ ಹೇಳಿದರು.

ಹಳೆಯಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ 2025-26ನೇ ಸಾಲಿನ, ನಾಲ್ಕನೇ ಆವೃತ್ತಿಯ, ಉಡಾನ್-ಅಂತರ ಕಾಲೇಜು ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಹಳೆಯಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ.ಕಿರಣ್ ಎಂ.ಅಧ್ಯಕ್ಷತೆ ವಹಿಸಿದ್ದರು. ಕಿನ್ನಿಗೋಳಿ ಇನ್ನರ್‌ವೀಲ್ ಸಂಸ್ಥೆ ಅಧ್ಯಕ್ಷೆ ರೇಖಾ ಶೆಟ್ಟಿ, ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪಾಯರ್ ಸಂಸ್ಥೆ ಸ್ಥಾಪಕ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್, ಅಧ್ಯಕ್ಷ ಅನಿಲ್ ಕುಮಾರ್, ರೋಟರಿ ಕಿನ್ನಿಗೋಳಿ ಸಂಸ್ಥೆ ಅಧ್ಯಕ್ಷ ಸಾಯಿನಾಥ್ ಶೆಟ್ಟಿ ಉಪಸ್ಥಿತರಿದ್ದರು.

ಎಂಟು ಪದವಿ ಪೂರ್ವ ಕಾಲೇಜುಗಳ 220 ವಿದ್ಯಾರ್ಥಿಗಳು ರಸ ಪ್ರಶ್ನೆ, ಮೆಹಂದಿ, ಫೇಸ್ ಪೇಂಟಿಂಗ್, ಕೊಲೇಜ್ ಮೇಕಿಂಗ್, ಸಮೂಹ ಗಾನ, ಮೊಬೈಲ್ ಫೋಟೋಗ್ರಫಿ ಹಾಗೂ ವಿಡಿಯೋಗ್ರಫಿ, ಬ್ರಾಂಡ್ ರಂಗೋಲಿ, ವಾಲಿಬಾಲ್ ಹಾಗೂ ಥ್ರೋಬಾಲ್ ಪಂದ್ಯಗಳಲ್ಲಿ ಭಾಗವಹಿಸಿದ್ದವು. ಕಿನ್ನಿಗೋಳಿ ಇನ್ನರ್‌ವೀಲ್ ರೋಟರಿ ಹಾಗೂ ಲಯನ್ಸ್ ಕ್ಲಬ್ ಬಪ್ಪನಾಡು ಸಂಸ್ಥೆಗಳು ಬಹುಮಾನ ಪ್ರಾಯೋಜಿಸಿದ್ದರು.