ಶಮೀಲ್ 
ದಕ್ಷಿಣ ಕನ್ನಡ

7 ವರ್ಷದ ಹಿಂದೆ ನಾಪತ್ತೆಯಾದ ವಿದ್ಯಾರ್ಥಿ ಪತ್ತೆಗೆ ಮನವಿ

ಕಾಸರಗೋಡು ನಿವಾಸಿ ಸಲೀಂ ಕೆ.ಎಂ. ಎಂಬುವರ ಪುತ್ರ ಮೊಹಮ್ಮದ್ ಶಮೀಲ್(21) 2018ರ, ಏಪ್ರಿಲ್ 17ರಂದು ಬೆಳಗ್ಗೆ 11.34ರ ಸುಮಾರಿಗೆ ಕಾಲೇಜು ಆವರಣಕ್ಕೆ ಭೇಟಿ ನೀಡಿ ಪಾರ್ಕಿಂಗ್ ಪ್ರದೇಶದ ಬಳಿ ಕಾಣಿಸಿಕೊಂಡಿದ್ದ. ನಂತರ ಕಾಲೇಜಿಗೂ ಹೋಗದೆ, ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದ. ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಷರೀಫ್ 2018ರ ಏಪ್ರಿಲ್ 18ರಂದು ಸಲ್ಲಿಸಿದ ದೂರಿನಂತೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅದೇ ದಿನ ಕಾಸರಗೋಡು ಠಾಣೆಯಲ್ಲೂ ಪ್ರಕರಣ ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.