ಮಂಗಳೂರು: ದಕ್ಷಿಣ ಕನ್ನಡ ಹಾಲು ಒಕ್ಕೂಟದ ಸಹಯೋಗದಲ್ಲಿ ರೈತರ ಏಳಿಗೆಗಾಗಿ, ಕಾರ್ಮಿಕರ ಕಲ್ಯಾಣಕ್ಕಾಗಿ ಮತ್ತು ಗ್ರಾಹಕರ ಸಂತೃಪ್ತಿಗಾಗಿ ನಂದಿನಿ ಸಿಹಿ ಉತ್ಸವವನ್ನು ಪ್ರತಿ ವರ್ಷ ಎರಡು ಬಾರಿ ಒಕ್ಕೂಟದ ವ್ಯಾಪ್ತಿಯಲ್ಲಿ ಆಚರಿಸಲಾಗುತ್ತಿದ್ದು, ಮಂಗಳವಾರ ಬಂಟ್ಸ್‌ಹಾಸ್ಟೇಲ್ ಸಮೀಪದ ಬಂಟರ ಭವನ ಪಾರ್ಲರ್‌ನಲ್ಲಿ ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ದಕ್ಷಿಣ ಕನ್ನಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್ ಅವರು ದೀಪ ಬೆಳಗಿಸುವುದರ ಮೂಲಕ ಸಿಹಿ ಉತ್ಸವಕ್ಕೆ ಚಾಲನೆ ನೀಡಿದರು. ವ್ಯವಸ್ಥಾಪಕರಾದ ಡಾ. ರಾಮಕೃಷ್ಣ ಭಟ್, ಮೋಹನ್ ಎಲ್. ಶಿಂದೆ ಉಪಸ್ಥಿತರಿದ್ದರು. ಜಾನೆಟ್ ರೊಸಾರಿಯೋ ಕಾರ್ಯಕ್ರಮ ನಿರೂಪಿಸಿದರು. ಸಚಿನ್ ಸ್ವಾಗತಿಸಿದರು, ಅಭಿಷೇಕ್ ಹೆಗ್ಡೆ ವಂದಿಸಿದರು.
ಈ ಬಾರಿ 77ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಂದಿನಿ ಸಿಹಿ ಉತ್ಸವವನ್ನು ಪ್ರಾರಂಭಿಸುತ್ತಿದ್ದು, ಮುಂದಿನ ಸೆಪ್ಟಂಬರ್ 20 ರವರೆಗೆ ಈ ನಂದಿನಿ ಸಿಹಿ ಉತ್ಸವ ಮಂದುವರಿಯಲಿದೆ. ನಂದಿನಿ ಸಿಹಿ ಉತ್ಪನ್ನಗಳ ಮೇಲೆ ಶೇಕಡಾ 20ರ ರಿಯಾಯಿತಿ ದೊರಕಲಿದ್ದು, ಗ್ರಾಹಕರು ಇದರ ಸಂಪೂರ್ಣ ಉಪಯೋಗವನ್ನು ಪಡೆದು ತನ್ಮೂಲಕ ಹೈನುಗಾರರ ಅಭಿವೃದ್ಧಿಗೆ ಸಹಕರಿಸುವಂತೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ತಿಳಿಸಿದೆ.