ಜಿಲ್ಲೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿಲ್ಲ ಬಂದ್‌ ಬಿಸಿ

ಮಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್‌ ಬಂದ್‌ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಜನ ಜೀವನ, ವಾಹನ ಸಂಚಾರ ಎಂದಿನಂತಿದ್ದು, ಅಂಗಡಿ, ಹೋಟೆಲ್‌ಗಳು ತೆರೆದಿವೆ. ಸರ್ಕಾರಿ, ಖಾಸಗಿ ಬಸ್‌, ರಿಕ್ಷಾ, ಟ್ಯಾಕ್ಸಿಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿಲ್ಲ. ವಿವಿಧ ರೈತ, ಕಾರ್ಮಿಕ ಹಾಗೂ ಜನಪರ ಸಂಘಟನೆಗಳು, ಎಡಪಕ್ಷಗಳ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ನಗರ ಬಂದರ್‌ನಲ್ಲಿ ಹಳೇ ಬಂದರು ಸಗಟು ಮಾರುಕಟ್ಟೆ ಕಾರ್ಮಿಕರ ಕಟ್ಟೆ ಬಳಿ, ಶ್ರಮಿಕ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಬಿ.ಸಿ.ರೋಡ್‌ ಬ್ರಹ್ಮಶ್ರೀ ನಾರಾಯಣಗುರು ವೃತ್ತದಲ್ಲಿ ರೈತ-ದಲಿತ-ಜನಪರ ಚಳುವಳಿಗಳ ಒಕ್ಕೂಟದಿಂದ ಪ್ರತಿಭಟನಾ ಸಭೆ ಹಾಗೂ ಕೆಲ ಹೊತ್ತು ರಾಷ್ಟ್ರೀಯ ಹೆದ್ದಾರಿ ಬಂದ್‌ ನಡೆಸಲಾಯಿತು.