ಜಿಲ್ಲೆ

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ನೇಮಕ

ಹರೀಶ ಎಂ.

ಮಂಗಳೂರು: ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪದಾಧಿಕಾರಿಗಳನ್ನು ನಿಯುಕ್ತಿಗೊಳಿಸಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆದೇಶ ಹೊರಡಿಸಿದ್ದಾರೆ.


ಉಪಾಧ್ಯಕ್ಷರು ಸುನೀಲ್ ಆಳ್ವ ಮೂಲ್ಕಿ, ಜಯಂತ್ ಪೂಜಾರಿ ಬೆಳ್ತಂಗಡಿ, ತಿಲಕ್‌ರಾಜ್ ಕೃಷ್ಣಾಪುರ, ರವೀಂದ್ರ ಶೆಟ್ಟಿ ಉಳಿದೊಟ್ಟು, ಪೂಜಾ ಪೈ, ರಾಕೇಶ್ ರೈ ಕೆಡಿಂಜಿ, ಶಾಂತಿ ಪ್ರಸಾದ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿಗಳಾಗಿ ಪ್ರೇಮಾನಂದ ಶೆಟ್ಟಿ ಮಂಗಳೂರು, ಯತೀಶ್ ಆರ್ವಾರ ಸುಳ್ಯ, ಕಿಶೋರ್ ಬೊಟ್ಯಾಡಿ ಪುತ್ತೂರು, ಕಾರ್ಯದರ್ಶಿಗಳಾಗಿ ವಿನಯ ಮುಳುಗಾಡು, ದೇವಪ್ಪ ಪೂಜಾರಿ ಬಂಟ್ವಾಳ, ಕವಿತಾ ದಿನೇಶ್ ಮೂಡುಶೆಡ್ಡೆ, ವಸಂತಿ ಕುಲಾಲ್ ಮಚ್ಚಿನ, ಪೂರ್ಣಿಮಾ, ವಿದ್ಯಾಗೌರಿ ಪುತ್ತೂರು, ದಿನೇಶ್ ಅಮ್ಟೂರು, ಸೀತಾರಾಮ ಬೆಳಾಲ್, ಕೋಶಾಧಿಕಾರಿ ಸಂಜಯ ಪ್ರಭು, ಕಾರ್ಯಾಲಯ ಕಾರ್ಯದರ್ಶಿ ಅರವಿಂದ ಬೆಂಗ್ರೆ ಅವರನ್ನು ಆಯ್ಕೆ ಮಾಡಲಾಗಿದೆ.


ಮಾಧ್ಯಮ ಪ್ರಮುಖ್‌ರನ್ನಾಗಿ ವಸಂತ್ ಜೆ. ಪೂಜಾರಿ, ಮನೋಹರ ಶೆಟ್ಟಿ, ಜಿಲ್ಲಾ ವಕ್ತಾರರನ್ನಾಗಿ ರಾಜ್‌ಗೋಪಾಲ್ ರೈ, ಮೋಹನ್ ರಾಜ್ ಕೆ.ಆರ್., ಅರುಣ್ ಶೇಟ್, ಸಾಮಾಜಿಕ ಜಾಲತಾಣ ಸಂಚಾಲಕರಾಗಿ ದಿರೇಶ್ ಕೆ., ಸಹ ಸಂಚಾಲಕ ಅಕ್ಷಯ್ ಆಳ್ವ, ಕಾರ್ತಿಕ್ ರಾವ್ ಗಂಜಿಮಠ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮೋರ್ಚಾ ಅಧ್ಯಕ್ಷರು: ಮಂಜುಳಾ ರಾವ್ (ಮಹಿಳಾ ಮೋರ್ಚಾ), ನಂದನ್ ಮಲ್ಯ (ಯುವ ಮೋರ್ಚಾ), ಜಗನ್ನಾಥ್ ಬೆಳ್ವಾಯಿ (ಎಸ್ಸಿ ಮೋರ್ಚಾ), ಹರೀಶ್ ಬಿಜತ್ರೆ (ಎಸ್.ಟಿ.ಮೋರ್ಚಾ), ಗಣೇಶ್ ಗೌಡ ನಾವುರ (ರೈತ ಮೋರ್ಚಾ).


7 ಮಂಡಲ ಅಧ್ಯಕ್ಷರು: ಶ್ರೀನಿವಾಸ ರಾವ್ (ಬೆಳ್ತಂಗಡಿ), ದಿನೇಶ್ ಪುತ್ರನ್ (ಮೂಡುಬಿದಿರೆ), ರಾಜೇಶ್ ಕೊಟ್ಟಾರಿ (ಮಂಗಳೂರು ನಗರ ಉತ್ತರ), ರಮೇಶ್ ಕಂಡೆಟ್ಟು (ಮಂಗಳೂರು ನಗರ ದಕ್ಷಿಣ), ಜಗದೀಶ್ ಆಳ್ವ ಕುವೆತ್ತಬೈಲ್ (ಮಂಗಳೂರು), ಚೆನ್ನಪ್ಪ ಕೋಟ್ಯಾನ್ (ಬಂಟ್ವಾಳ), ವೆಂಕಟ ವಳಲಂಬೆ (ಸುಳ್ಯ) ಅವರನ್ನು ಆಯ್ಕೆ ಮಾಡಲಾಗಿದೆ.