ಜಿಲ್ಲೆ

ದ.ಕ 13 ಹೊಸ ಪ್ರಕರಣ ಪತ್ತೆ

Dakshina Kannada

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ 13 ಹೊರ ಕರೊನಾ ಪ್ರಕರಣಗಳು ಪತ್ತೆಯಾಗಿವೆ.

11ರಂದು ಸೌದಿ ಅರೇಬಿಯಾದಿಂದ ಬಂದು ಕ್ವಾರಂಟೈನ್‌ನಲ್ಲಿದ್ದ ನಾಲ್ವರು, 16ರಂದು ಶಾರ್ಜಾದಿಂದ ಬಂದು ಕ್ವಾರಂಟೈನ್‌ನಲ್ಲಿದ್ದ 6 ಮಹಿಳೆಯರು ಮತ್ತು ಓರ್ವ ಪುರುಷನಲ್ಲಿ ಸೋಂಕು ದೃಢವಾಗಿದೆ. ಇದೇ ವೇಳೆ ಮಂಗಳೂರು ನಿವಾಸಿಗಳಾಗಿರುವ 78ರ ವೃದ್ಧ ಮತ್ತು 22 ವರ್ಷದ ಯುವಕನಲ್ಲಿ ಐಎಲ್‌ಐ (ಇನ್‌ಫ್ಲೂಯೆನ್ಜಾ ಲೈಕ್ ಇಲ್‌ನೆಸ್) ಪ್ರಕರಣದಲ್ಲಿ ಸೋಂಕು ಕಂಡು ಬಂದಿದೆ. ಎಲ್ಲರನ್ನೂ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಂದು ವರ್ಷದ ಇಬ್ಬರು ಗಂಡು ಮಕ್ಕಳು ಮತ್ತು ಎರಡು ವರ್ಷದ ಹೆಣ್ಣು ಮಗು ಸಹಿತ 20 ಮಂದಿ ಗುಣಮುಖರಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಐಸಿಯುನಲ್ಲಿರುವ 70 ವರ್ಷದ ವೃದ್ಧನ ಸ್ಥಿತಿ ಇನ್ನೂ ಗಂಭೀರವಾಗಿದ್ದು, ಮಧುಮೇಹ ಮತ್ತು ಅರ್ಬುದ ರೋಗದಿಂದ ಬಳಲುತ್ತಿರುವ 52 ವರ್ಷದ ವ್ಯಕ್ತಿಗೂ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾಸರಗೋಡಿನ ನಾಲ್ವರಿಗೆ ಸೋಂಕು

ಕಾಸರಗೋಡು: ಜಿಲ್ಲೆಯ ನಾಲ್ವರು ಸಹಿತ ಕೇರಳದಲ್ಲಿ ಶುಕ್ರವಾರ ಒಟ್ಟು 118 ಮಂದಿಯಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ರೋಗ ಕಾಣಿಸಿಕೊಂಡವರಲ್ಲಿ 67 ಮಂದಿ ವಿದೇಶದಿಂದ, 45 ಮಂದಿ ಇತರ ರಾಜ್ಯಗಳಿಂದ ಹಾಗೂ ಆರು ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ.