ಬೆಟ್ಟದಪುರ: ಚನ್ನಕೇಶವಪುರ ಹಾಲು ಉತ್ಪಾದಕರ ಸಹಕಾರ ಸಂಘವು 2024-25ನೇ ಸಾಲಿನಲ್ಲಿ 4.07 ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ಮೈಮುಲ್ ವಿಸ್ತರಣಾಧಿಕಾರಿ ಅವಿನಾಶ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಚನ್ನಕೇಶಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಬುಧವಾರ ನಡೆದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಒಕ್ಕೂಟದಿಂದ ಸಿಗುವಂತಹ ಸವಲತ್ತುಗಳನ್ನು ಪ್ರತಿಯೊಬ್ಬರೂ ಸದುಪಯೋಗ ಮಾಡಿಕೊಳ್ಳಿರಿ. ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಅಧಿಕ ಲಾಭಗಳಿಸಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಘಕ್ಕೆ ಹೆಚ್ಚು ಹಾಲು ಸರಬರಾಜು ಮಾಡಿದ ಸದಸ್ಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಪುಟ್ಟರಾಜ್ ರೆಡ್ಡಿ, ಉಪಾಧ್ಯಕ್ಷ ಕೃಷ್ಣೇಗೌಡ, ನಿರ್ದೇಶಕರಾದ ಅಪ್ಪಾಜಿಗೌಡ, ಲೋಕೇಶ್, ಮಾಣಿಕ್ಯ, ಮಂಜೇಗೌಡ, ಸೋಮೇಗೌಡ, ಭಾರತಿ, ಕಾಳಯ್ಯ, ಸಿ.ಕೃಷ್ಣೇಗೌಡ, ಮಾಜಿ ಗ್ರಾ.ಪಂ.ಅಧ್ಯಕ್ಷ ಸುಂದರೇಗೌಡ, ಮುಖಂಡರಾದ ಜವರೇಗೌಡ, ಸುಬ್ರಮಣಿ, ಕುಮಾರ್, ದೇವೇಗೌಡ, ಗೋವಿಂದೇಗೌಡ, ರಮೇಶ್, ಸಂಘದ ಸಿಇಒ ಸಿ.ಕೆ ಶೇಖರ್, ಸಿಬ್ಬಂದಿ ಹನುಮಂತ, ಸಿ.ಎಸ್ ರಮೇಶ ಸೇರಿದಂತೆ ಸದಸ್ಯರು ಇದ್ದರು.