ಜಿಲ್ಲೆ

ಹೈನುಗಾರಿಕೆ ಸಾಲ ಸದ್ಬಳಕೆಯಾಗಲಿ

ಅಥಣಿ ಗ್ರಾಮೀಣ: ಸಹಕಾರ ಸಂಘದ ಸದಸ್ಯರ ಸಹಕಾರದಿಂದ ಹಾಗೂ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಪ್ರಾಮಾಣಿಕ ಸೇವೆಯಿಂದ ಸಂಘ 16.98 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಮಹಾದೇವ ಹಿಪ್ಪರಗಿ ಹೇಳಿದರು.

ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದ ವಿವಿಧೋದ್ದೇಶಗಳ ಗ್ರಾಮೀಣ ಕೃಷಿ ಸಹಕಾರ ಸಂಘದ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿ, ಸಂಘದ ಲಾಭಾಂಶದ ಆಧಾರದ ಮೇಲೆ ಸದಸ್ಯರಿಗೆ ಲಾಭ ವಿತರಿಸಲಾಗುವದು. ವಿಶೇಷವಾಗಿ ಹೈನುಗಾರಿಕೆ ಸಾಲ ವಿತರಿಸಲಾಗುತ್ತಿದ್ದು,

ಪ್ರತಿಯೊಬ್ಬರೂ ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು. ಕಾರ್ಯನಿರ್ವಾಹಕ ನಾರಾಯಣ ಪೂಜಾರಿ ವರದಿ ವಾಚಿಸಿ, ಸಂಘ 900 ಸದಸ್ಯರನ್ನು ಹೊಂದಿದ್ದು, 65.72 ಲಕ್ಷ ರೂ. ಷೇರು ಬಂಡಾವಾಳ ಹೊಂದಿದೆ. 8.57 ಲಕ್ಷ ರೂ. ಠೇವಣಿ ಮತ್ತು 11.24 ಲಕ್ಷ ರೂ. ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು. ನಿರ್ದೇಶಕರಾದ ಆನಂದ ದೂಳಶೆಟ್ಟಿ, ಸುನೀಲ ಕೆಂಚಣ್ಣವರ ಮಾತನಾಡಿದರು. ಉಪಾಧ್ಯಕ್ಷ ಬಸಪ್ಪ ಕೋಹಳ್ಳಿ, ಪರಗೊಂಡ ತಾಂವಶಿ, ಶ್ರೀಶೈಲ ಸನದಿ, ಅಪ್ಪಾಸಾಬ ಶೇಗಾಂವಿ, ಪರಸಪ್ಪ ಅಥಣಿ, ಅಣ್ಣಪ್ಪ ಸನದಿ, ಜಯವಂತ ನಾಟಿಕಾರ, ಅನಿಲ ಪಾಟೀಲ, ಪ್ರಕಾಶ ಪೂಜಾರಿ ಇತರರಿದ್ದರು.