ಜಿಲ್ಲೆ

ಕೂಡುಮಂಗಳೂರು ಡೇರಿ ವಾರ್ಷಿಕ ಮಹಾಸಭೆ

ಸುನಿಲ್ ಪೊನ್ನೇಟಿ

ಕುಶಾಲನಗರ:

ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡುಮಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ಸೋಮವಾರ ನಡೆಯಿತು.

ಸಭೆಯಲ್ಲಿ ಹಾಜರಿದ್ದ ಸಂಘದ ಸದಸ್ಯರು ಹಾಲು ಉತ್ಪಾದಕರಿಗೆ ಹೆಚ್ಚು ಅನುದಾನ ನೀಡುವ ಬಗ್ಗೆ, ಅಭಿವೃದ್ಧಿಗೆ ಪೂರಕವಾದ ಅಂಶಗಳ ಬಗ್ಗೆ ಚರ್ಚೆ ನಡೆಸಿದರು.

ಈ ವೇಳೆ ಮಾತನಾಡಿದ ಕೆ.ಕೆ. ಹೇಮಂತ್ ಕುಮಾರ್, ಸದಸ್ಯರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಅದರ ಮೂಲಕ ಸಂಘದ ಅಭಿವೃದ್ಧಿಗೆ ಅನುಕೂಲವಾಗುವಂತೆ ಎಲ್ಲಾ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುವುದು.

2024-25ನೇ ಸಾಲಿನಲ್ಲಿ 2.93.ಲಕ್ಷ ಲಾಭಾಂಶ ಗಳಿಸಿದೆ. ಅದರ ಮುಖೇನ ಅಭಿವೃದ್ಧಿಗೆ ಪ್ರಯತ್ನ ನಡೆಸಲಾಗುವುದು ಎಂದರು. ಉಪಾಧ್ಯಕ್ಷೆ ನರಸಮ್ಮ, ನಿರ್ದೇಶಕರಾದ ಕೆ.ಎಸ್. ಹರೀಶ್, ಕೆ. ಹೆಚ್. ಗಿರೀಶ್, ವಿಶ್ವೇಶ್ವರಯ್ಯ, ಕೆ.ಎ. ರವಿಕುಮಾರ್, ನಟೇಶ್ ಕುಮಾರ್, ಪುನೀತ್ ಕುಮಾರ್, ಗೌತಮ್ ಕುಮಾರ್, ಅಣ್ಣಾಜಿ ನಾಯಕ್, ಜಯಮ್ಮ , ಸಹಕಾರ ಸಂಘಗಳ ವಿಸ್ತಾರಣಾಧಿಕಾರಿ ಬಿ.ಬಿ. ವೀಣಾ, ಕಾರ್ಯದರ್ಶಿ ಬಿಂದು ಮತ್ತಿತರರು ಇದ್ದರು.