ಜಿಲ್ಲೆ

ರಾಜಕೀಯ ಆಶಯಕ್ಕೆ ಕಾನ್ಶಿರಾಂ ಮರುಹುಟ್ಟು: ಬಹುಜನ ಸಮಾಜ ಪಕ್ಷದ ಕಾರ್ಯದರ್ಶಿ ವೆಂಕಟೇಶ್ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ರಾಜಕೀಯ ಆಶಯಗಳಿಗೆ ಮರುಹುಟ್ಟು ನೀಡಿದ್ದು ದಾದಾ ಸಾಹೇಬ್ ಕಾನ್ಶಿರಾಂ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ಎಂ.ಎಸ್.ವೆಂಕಟೇಶ್ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಜಿಲ್ಲಾ ಬಿಎಸ್‌ಪಿಯಿಂದ ಆಯೋಜಿಸಿದ್ದ ದಾದಾಸಾಹೇಬ್ ಕಾನ್ಶಿರಾಂ 91ನೇ ವರ್ಷದ ಜಯಂತಿ ಹಾಗೂ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಈ ದೇಶದ ಮೂಲನಿವಾಸಿಗಳಾದ ಬಹುಜನರು ದೇಶವನ್ನಾಳುವ ರಾಜಕೀಯ ಶಕ್ತಿಗಳಾಗಿ ಬೆಳೆಯಬೇಕು. ಉತ್ತರಪ್ರದೇಶವನ್ನು ರಾಜಕೀಯ ಪ್ರಯೋಗಶಾಲೆಯನ್ನಾಗಿಸಿಕೊಂಡ ರಾಜಕೀಯ ತಜ್ಞ ದಾದಾಸಾಹೇಬ್ ಕಾನ್ಶಿರಾಂ ಅವರು ಬಹುಜನ ಚಳವಳಿ ಆರಂಭಿಸಿ ಬಿಎಸ್‌ಪಿ ಪಕ್ಷ ಸ್ಥಾಪಿಸಿ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಸೆಡ್ಡು ಹೊಡೆದರು. ಮಾತ್ರವಲ್ಲದೆ ಹಂತ ಹಂತವಾಗಿ ಗೆಲುವು ಸಾಧಿಸಿ ಮಾಯಾವತಿ ಅವರನ್ನು 3 ಬಾರಿ ಮುಖ್ಯಮಂತ್ರಿ ಮಾಡಿದ ಕೀರ್ತಿ ಸಲ್ಲುತ್ತದೆ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ಶಿವಶಂಕರ್, ಪದಾಧಿಕಾರಿಗಳಾದ ಚಲುವರಾಜು, ವೀರಭದ್ರಯ್ಯ, ಸುಧಾ, ವಜ್ರಮುನಿ, ವಿನಯ್‌ಕುಮಾರ್ ಇತರರಿದ್ದರು.