ಜಿಲ್ಲೆ

ಜೀವ ಉಳಿಸಲು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ಅಪಘಾತ, ಶಸ ಚಿಕಿತ್ಸೆಯಂತಹ ತುರ್ತು ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದವರ ಜೀವ ಉಳಿಸಲು ಪ್ರತಿಯೊಬ್ಬರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಬೇಕು ಎಂದು ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಕಾಂತರಾಜು ತಿಳಿಸಿದರು.
ಪಟ್ಟಣದ ಶ್ರೀ ಸಿದ್ದಲಿಂಗೇಶ್ವರ ಸಮುದಾಯ ಭವನದಲ್ಲಿ ಸೋಂಪುರ ಬಿಜೆಪಿ ಹಾಗೂ ಬೆಂಗಳೂರಿನ ನಾರಾಯಣ ಹೃದಯಾಲಯದಿಂದ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ರಕ್ತದಾನದಿಂದ ನಾಲ್ಕು ಜನರ ಜೀವ ಉಳಿಸಬಹುದು. ಹಾಗೆಯೇ ಆರೋಗ್ಯವಂತರು ನಿಗದಿತವಾಗಿ ರಕ್ತದಾನ ಮಾಡುವುದರಿಂದ ಯಾವುದೇ ಸಮಸ್ಯೆ ಇಲ್ಲ. ರಕ್ತದಾನ ಮಾಡಿದ ಕೆಲವೇ ಗಂಟೆಯಲ್ಲಿ ಹೊಸ ರಕ್ತ ಕಣಗಳು ಉತ್ಪತ್ತಿಯಾಗಲಿವೆ ಎಂದರು.
ಸೋಂಪುರ ಹೋಬಳಿ ಅಧ್ಯಕ್ಷ ಕೆ.ಎಂ.ಮಧು ಮಾತನಾಡಿ, ರಕ್ತದಾನ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದರು.
59 ಯುನಿಟ್ ರಕ್ತ ಸಂಗ್ರಹಿಸಲಾಯಿತು. ಜಿಲ್ಲಾ ವಕ್ತಾರ ಗುಬ್ಬಣ್ಣ ಸ್ವಾಮಿ, ತಾಲೂಕು ಉಪಾಧ್ಯಕ್ಷ ಜಗದೀಶ್ ಚೌಧರಿ, ಪದಾಧಿಕಾರಿಗಳಾದ ಮಂಜುಳಾ, ವೇದಾವತಿ, ನಳಿನಾ, ಲತಾ, ಮಂಗಳಮ್ಮ, ಕೆ.ಎಂ.ಗೌಡ, ಬಾಣವಾಡಿ ರಮೇಶ್ ಬಾಬು, ವೆಂಕಟೇಶ, ಕೆಂಗಲ್ ಕುಮಾರ, ಗೋಟ್ಟಿಕೆರೆ ಪಾಳ್ಯ ಪುಟ್ಟರುದ್ರ, ಹೊನ್ನೇನಹಳ್ಳಿ ರುದ್ರೇಶ್, ಗಂಗಾಧರ, ಗೆದ್ದಲಹಳ್ಳಿ ಸಿದ್ದರಾಜು, ಕೆಂಗಲ್ ಶ್ರೀನಿವಾಸ, ತುಳಸಿ ರಾಮು, ಕೆಂಗಲ್ ವಾಸು, ಡಾ.ವಿವೇಕ್, ನವೀನ್ ಕುಮಾರ್, ವಿ.ರಾಜೇಶ್, ದರ್ಶನ್, ಚೇತನ್, ಪ್ರವೀಣ್, ರಾಮು, ಪ್ರಿಯಾಂಕಾ ಇತರರು ಇದ್ದರು.