ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ ( ಕ.ವಿ. ಪ್ರ. ನಿ.ನಿ.) ಲೆಕ್ಕಾಧಿಕಾರಿಗಳ ಸಂಘವು ಶನಿವಾರ (ಸೆ. 14) ಬೆಳಗ್ಗೆ 10 ಗಂಟೆಗೆ ಆನಂದರಾವ್ ವೃತ್ತದಲ್ಲಿನ ನಿಗಮದ ಬೆಳ್ಳಿಭವನದಲ್ಲಿ ‘ದಾಸವಾಣಿ’ ಸಂಗೀತ ಕಾರ್ಯಕ್ರಮ ಆಯೋಜಿಸಿದೆ.
ಬೆಂ.ವಿ. ಪ್ರ.ನಿ.ನಿ. ನಿವೃತ್ತ ಲೆಕ್ಕ ನಿಯಂತ್ರಣಾಧಿಕಾರಿ ನರಸಿಂಹ ಭಟ್ಟ ದಾಸವಾಣಿ ಹಾಡಲಿದ್ದು, ಹಾರ್ಮೋನಿಯಂ ವಾದಕ ಎಸ್. ಸುರೇಶ್, ತಬಲ ವಾದಕ ನಂದಮೋಹನ್, ಕೊಳಲು ವಾದಕ ಶ್ರೀಹರಿ ಭಟ್ ಸಾಥ್ ನೀಡಲಿದ್ದಾರೆ. ಬಳಿಕ ಕೆಪಿಟಿಸಿಎಲ್ ನಿವೃತ್ತ ಅಧೀಕ್ಷಕ ಇಂಜಿನಿಯರ್ ಸತ್ಯಬೋಧ ಅವರನ್ನು ಸನ್ಮಾನಿಸಲಾಗುತ್ತದೆ. ಡಾ. ಕೆ.ಎಸ್. ನವೀನ್ ಅವರು ‘ಹಿರಿಯರ ಸ್ವಸ್ಥ್ಯ ಬಾಳಿಗೆ, ಪಿಸಿಯೋಥೆರಪಿ ದೀವಿಗೆ’ ವಿಷಯ ಕುರಿತು ಆರೋಗ್ಯ ಸಲಹೆ ನೀಡಲಿದ್ದಾರೆ. ಸಾಹಿತಿ ಡಾ. ಚಿಂತಾಮಣಿ ಕೊಡ್ಲೆಕೆರೆ ಉಪಸ್ಥಿತರಿರುವರು ಎಂದು ಸಂಘದ ವಿಶ್ವೇಶ್ವರ ಗಾಯತ್ರಿ ತಿಳಿಸಿದ್ದಾರೆ.