ಜಿಲ್ಲೆ

ಡಿ.ತುಮಕೂರಿನಲ್ಲಿ ಧನುರ್ಮಾಸ ಪೂಜೆ ಮುಕ್ತಾಯದ ಅಂಗವಾಗಿ ರಂಗೋಲಿ ಸ್ಪರ್ಧೆ

reportermys

ಚನ್ನರಾಯಪಟ್ಟಣ : ತಾಲೂಕಿನ ಡಿ.ತುಮಕೂರು ಗ್ರಾಮದಲ್ಲಿ ಶ್ರೀ ಕೆಂಪಮ್ಮ, ಕಲ್ಲೇಶ್ವರ ಸಂಘದ ವತಿಯಿಂದ ಧನುರ್ಮಾಸ ಪೂಜೆ ಮುಕ್ತಾಯದ ಅಂಗವಾಗಿ ಮಂಗಳವಾರ ರಂಗೋಲಿ ಸ್ಪರ್ಧೆ ನಡೆಯಿತು.

ಬೆಂಗಳೂರಿನ ವಿಪ್ರೊ ಹಾಗೂ ಸಂತೂರ್ ಕಂಪನಿಯ ಸಹಯೋಗದಲ್ಲಿ ರಂಗೋಲಿ ಸ್ಪರ್ಧೆ ಜರುಗಿದ್ದು, ಸುತ್ತಮುತ್ತಲಿನ ಏಳು ಗ್ರಾಮಗಳಿಂದ ಸುಮಾರು 65ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ಅವರಲ್ಲಿ ಶೇ. 40ರಷ್ಟು ಯುವಕರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಬೆಳಗ್ಗೆ 11 ಗಂಟೆಗೆ ಪ್ರಾರಂಭಗೊಂಡ ರಂಗೋಲಿ ಸ್ಪರ್ಧೆ 12.15 ಕ್ಕೆ ಪೂರ್ಣಗೊಂಡಿತು.

ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಗೆ ಆಯ್ಕೆಯಾದ ಸ್ವರ್ಧಿಗಳಿಗೆ ವಿಶೇಷ ಬಹುಮಾನ ಹಾಗೂ ಭಾಗವಹಿಸಿದ್ದ ಎಲ್ಲಾ ಸ್ವರ್ಧಿಗಳಿಗೂ ಸಮಾಧಾನಕರ ಬಹುಮಾನ ವಿತರಿಸಲಾಯಿತು.

ವಿಪ್ರೊ ಕಂಪನಿಯ ಜೆಎಸ್ಒ ಹರೀಶ್ ಶೆಟ್ಟಿ, ಮಾರಾಟ ವಿಭಾಗದ ಮುಖ್ಯಸ್ಥ ನಟರಾಜ್, ವಿತರಕ ರಂಗಸ್ವಾಮಿ, ಪ್ರಮುಖರಾದ ಶಿವಣ್ಣ, ರವಿ ಹಾಗೂ ಇತರರು ಹಾಜರಿದ್ದರು.