ಬದ್ರಿಯಾ ಜುಮಾ ಮಸ್ಜಿದ್ ಬಜಾಲ್ ನಂತೂರು ಮಂಗಳೂರು ಇದರ ಅದೀನದಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ ತಂಗಳ್ ರವರ 1500ನೇ ಈದ್ ಮೀಲಾದುನ್ನೆಬಿ ಸಡಗರ ಸಂಭ್ರಮದಿಂದ ದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಮಾಅತ್ ಅಧ್ಯಕ್ಷರಾದ ಅಬ್ದುಲ್ ರವೂಫ್ ರವರು ಧ್ವಜಾರೋಹಣ ಗೈದು ಪ್ರಸ್ತುತ ರ್ಯಾಲಿಗೆ ಚಾಲನೆ ನೀಡಿದರು. 
ಜಿಲ್ಲೆ

ದ.ಕ. ಜಿಲ್ಲಾದ್ಯಂತ ಮೀಲಾದುನ್ನಬಿ ಆಚರಣೆ, ಪ್ರವಾದಿ ಸಂದೇಶ ಜಾಥಾ, ಸಾಂಸ್ಕೃತಿಕ ಕಾರ್ಯಕ್ರಮ

ಮಂಗಳೂರು: ಪ್ರವಾದಿ ಮುಹಮ್ಮದ್ ಪೈಗಂಬ್ ಅವರ ಜನ್ಮದಿನ ಮೀಲಾದುನ್ನಬಿ ಶುಕ್ರವಾರ ದ.ಕ. ಜಿಲ್ಲಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಸಾರ್ವಜನಿಕವಾಗಿ ದಫ್, ಹಾಡುಗಳೊಂದಿಗೆ ಕಾಲ್ನಡಿಗೆ ಮತ್ತು ವಾಹನಗಳ ಮೀಲಾದ್ ರ‌್ಯಾಲಿಯ ಮೂಲಕ ಪ್ರವಾದಿ ಸಂದೇಶ ಜಾಥಾ ನಡೆಸಲಾಯಿತು. ಜಿಲ್ಲೆಯ ಬಹುತೇಕ ಮದ್ರಸ, ಮಸೀದಿಗಳಲ್ಲಿ ಬೆಳಗ್ಗೆ ವಿಶೇಷ ಮಜ್ಲಿಸ್, ಧ್ವಜಾರೋಹಣ, ಬೆಳಗ್ಗೆ ಮತ್ತು ರಾತ್ರಿ ಸಭಾ ಕಾರ್ಯಕ್ರಮಗಳನ್ನು ನಡೆಸಿ ಪ್ರವಾದಿ ಜೀವನದ ಸಂದೇಶ ಸಾರಲಾಯಿತು. ಅನೇಕ ಕಡೆಗಳಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರ ಮಧ್ಯೆ ಬಾಂಧವ್ಯ ಬೆಸೆಯುವ ಸೌಹಾರ್ದ ಕಾರ್ಯಕ್ರಮಗಳು ನಡೆಯಿತು. ರ‌್ಯಾಲಿಯಲ್ಲಿ ಪಾಲ್ಗೊಂಡ ಮದ್ರಸ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ಹಂಚಿ, ಪಾನೀಯ ವಿತರಿಸಲಾಯಿತು. ಮಧ್ಯಾಹ್ನ ಮಸೀದಿ ಮತ್ತು ಮದ್ರಸಗಳಲ್ಲಿ ಬಿರಿಯಾನಿ, ತುಪ್ಪದೂಟ, ರೊಟ್ಟಿಯೊಂದಿಗೆ ಮಾಂಸದ ಪದಾರ್ಥ ತಯಾರಿಸಿ ಹಂಚಲಾಯಿತು. ಮನೆಗಳಲ್ಲೂ ಕಾರ್ಯಕ್ರಮಗಳಲ್ಲಿ ವಿಶೇಷ ಅಡುಗೆ ಮಾಡಲಾಗಿತ್ತು. ಮಕ್ಕಳಲ್ಲದೆ ಯುವಕರು, ಹಿರಿಯ ಸದಸ್ಯರು ಕೂಡಾ ಮಿಲಾದುನ್ನಬಿಯ ರ್ಯಾಲಿಯಲ್ಲಿ ಪಾಲ್ಗೊಂಡು ಸಂಭ್ರಮಕ್ಕೆ ಸಾಕ್ಷಿಯಾದರು.

*ಇಸ್ಲಾಮಿಕ್ ಕ್ಯಾಲೆಂಡರ್‌ನ ರಬೀಉಲ್ ಅವ್ವಲ್ ತಿಂಗಳಲ್ಲಿ ಸುನ್ನಿ ಮುಸ್ಲಿಮರು ಮಸೀದಿ ಮತ್ತು ಮನೆಗಳಲ್ಲಿ ಪ್ರವಾದಿ ಗುಣಗಾನದ ವೌಲಿದ್ ಪಾರಾಯಣ ಮಾಡುತ್ತಾರೆ. ಮದ್ರಸಗಳ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಾರೆ. ವಿಶೇಷವಾಗಿ ಪ್ರವಾದಿ ಪ್ರೇಮ ಬಿಂಬಿಸುವ ಹಾಡು, ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಗುತ್ತಿದೆ. ತಿಂಗಳಿಡೀ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಆದರೆ ರಬೀಉಲ್ ಅವ್ವಲ್ ತಿಂಗಳ ಚಾಂದ್ 12ರಂದು ವಿಶೇಷ ಕಾರ್ಯಕ್ರಮ ನಡೆಸಲಾಗುತ್ತಿದೆ.