ಮಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸಲ್ಮಾನರ ಓಲೈಕೆಗೋಸ್ಕರ ಸಂವಿಧಾನದ ಆಶಯಕ್ಕೆ ವಿರುದ್ದವಾದ
ಹೇಳಿಕೆ ನೀಡಿರುವುದು ಖಂಡನೀಯ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ. ಹೇಳಿದ್ದಾರೆ.
ದೇಶದ ಸಂಪತ್ತನ್ನು ಮುಸಲ್ಮಾನರಿಗೆ ಹಂಚಲು ಸಿದ್ದರಾಮಯ್ಯ ಯಾರು? ಈ ದೇಶ ಸಿದ್ದರಾಮಯ್ಯನವರ ಓರ್ವನ ಆಸ್ತಿಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸ್ವಾತಂತ್ರೃ ಪೂರ್ವದಿಂದಲೇ ಮುಸ್ಲಿಂ ಓಲೈಕೆ ಮಾಡುತ್ತಾ ಬಂದಿದೆ. ಇದರ ಪರಿಣಾಮದಿಂದ ಮತೀಯ ಆಧಾರದಲ್ಲಿ ದೇಶ ವಿಭಜನೆಯಾಗಿರುವ ಇತಿಹಾಸ ನಮ್ಮ ಕಣ್ಣ ಮುಂದಿದೆ. ಈ ದೇಶದಲ್ಲಿ ನಡೆದಿರುವ ಪ್ರತ್ಯೇಕತೆಯ ಕೂಗಿಗೆ, ಭಯೋತ್ಪಾದನ
ಕೃತ್ಯಗಳಿಗೆ, ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಪರೋಕ್ಷವಾಗಿ ಕಾಂಗ್ರೆಸ್‌ನ ಓಲೈಕೆ ರಾಜಕಾರಣವೇ ಕಾರಣ. ಸಿದ್ದರಾಮಯ್ಯನವರ ಹೇಳಿಕೆಯಿಂದ ಕಾಂಗ್ರೆಸ್‌ನ ನಿಜ ಬಣ್ಣ ಮತ್ತೊಮ್ಮೆ ಬಯಲಾಗಿದೆ ಎಂದು ಸುದರ್ಶನ ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.