ಎನ್.ಆರ್.ಪುರ: ಈ ದೇಶ ಶೋಷಣೆ ಮುಕ್ತ ರಾಷ್ಟ್ರವಾಗಬೇಕು ಎಂದು ಡಿ.ದೇವರಾಜ ಅರಸು ಕನಸು ಕಂಡಿದ್ದರು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾಯ ಡಾ.ಧನಂಜಯ ಹೇಳಿದರು.
ಡಿ.ದೇವರಾಜ ಅರಸು ಜನ್ಮ ದಿನಾಚರಣೆ ಸಮಾರಂಭದಲ್ಲಿ ಉಪನ್ಯಾಸ ನೀಡಿ, ದೇವರಾಜ ಅರಸು 1968 ರಲ್ಲಿ ಮುಖ್ಯ ಮಂತ್ರಿಯಾಗಿ ಎಂಟು ವರ್ಷ ಆಳ್ವಿಕೆ ನಡೆಸಿದ್ದರು. ಹಿಂದಳಿದವರಿಗಾಗಿ ಹಲವು ಕಾರ್ಯಕ್ರಮ ರೂಪಿಸಿದ್ದರು ಎಂದರು. ತಹಸೀಲ್ದಾರ್ ತನುಜ.ಟಿ.ಸವದತ್ತಿ ಮಾತನಾಡಿ, ಡಿ.ದೇವರಾಜ ಅರಸು ಹಿಂದಳಿದ ವಗರ್ಗಳ ಏಳೆಗ್ಗೆಗಾಗಿ ಹಾವನೂರು ಆಯೋಗ ರಚನೆ ಮಾಡಿದ್ದರು.ಭೂ ಸುಧಾರಣೆ ಜಾರಿಗೆ ತಂದು ಉಳುವುವನೇ ಭೂ ಒಡೆಯ ಎಂಬ ಕ್ರಾಂತಿಕಾರಕ ಸುಧಾರಣೆ ತಂದಿದ್ದರು ಎಂದರು.
ಇಒ ನವೀನ್‌ಕುಮಾರ್ ಮಾತನಾಡಿ, ದೇವರಾಜ ಅರಸು ಕಾಲದಲ್ಲಿ ರಾಜ್ಯದಲ್ಲಿ 16 ಸಾವಿರ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಿದ್ದರು. ಜೀತ ಪದ್ದತಿ ನಿರ್ಮೂಲನೆ, ಮಲ ಹೊರುವ ಪದ್ದತಿ ನಿರ್ಮಿಲನೆ ಜಾರಿಗೆ ತಂದು ಇಡೀ ದೇಶಕ್ಕೆ ಮಾದರಿಯಾಗಿದ್ದರು ಎಂದರು. ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ , ವಿ.ರಮೇಶ್‌ಕುಮಾರ್, ಸದಸ್ಯರಾದ ಜುಬೇದಾ, ಸುರೈಯಾಭಾನು, ಮುನಾವರ್ ಪಾಷಾ,ಎ.ಸಿ.ಶ್ರೀನಿವಾಸ್, ಸೈಯದ್‌ವಸೀಂ, ಎಚ್.ಎಂ.ಶಿವಣ್ಣ, ಮಂಜುನಾಥ್, ಆರ್.ವಿ.ಮಂಜುನಾಥ್,ಎಚ್.ಮಂಜುನಾಥ್ ಇದ್ದರು.