ಮದ್ದೂರು: ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆಯನ್ನು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಪಟ್ಟಣದಲ್ಲಿ ಶನಿವಾರ ವಿತರಣೆ ಮಾಡಿದರು.
ಜ.22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪವಿತ್ರವಾದ ಮಂತ್ರಾಕ್ಷತೆಗೆ ಪೂಜೆ ಸಲ್ಲಿಸಿದರೆ ಒಳಿತಾಗುತ್ತದೆ. ಎಲ್ಲರೂ ಅಯೋಧ್ಯೆಗೆ ಉದ್ಘಾಟನೆ ದಿನ ಹೋಗಲು ಸಾಧ್ಯವಿಲ್ಲ. ಆದ್ದರಿಂದ ರಾಮನ ಹೆಸರಿನಲ್ಲಿ ಮಂತ್ರಾಕ್ಷತೆಗೆ ಪೂಜೆ ಸಲ್ಲಿಸಲಿ ಎಂಬ ಉದ್ದೇಶದಿಂದ ಮಂತ್ರಾಕ್ಷತೆಯನ್ನು ಅಯೋಧ್ಯೆಯಿಂದ ದೇಶದ ಪ್ರತಿ ಮನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ತಲುಪಿಸಲಾಗುತ್ತಿದೆ ಎಂದು ತಿಳಿಸಿದರು.
ಮುಖಂಡರಾದ ಸುಧೀರ್, ಅಭಿಷೇಕ್, ಪಂಚಮಿ ಗುರು, ಎಂ.ಸಿ.ಸಿದ್ದು, ರವಿಕುಮಾರ್, ಶಿವನಂಜಯ್ಯ, ಮಲ್ಲರಾಜು, ಬಸವರಾಜು, ಗೂಳೀಶ್‌ಗೌಡ ಇತರರು ಇದ್ದರು.