ಬೆಳಗಾವಿ: ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ಗ್ರಾಹಕರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ರೀಫಿಲ್ ಮಾಡಿಕೊಡಲು ಜೂ. 30ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಯೋಜನೆಯಡಿ ಉಚಿತವಾಗಿ 3 ಗ್ಯಾಸ್ ಸಿಲಿಂಡರ್‌ಗಳನ್ನು ರೀಫಿಲ್ ಮಾಡಿಕೊಡಲಾಗುವುದು. ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದವರಿಗೆ ಮಾತ್ರ ಈ ನಿಯಮ ಅನ್ವಯಿಸುತ್ತದೆ.
ಒಂದು ತಿಂಗಳಲ್ಲಿ ಒಂದೇ ಗ್ಯಾಸ್ ರೀಫಿಲ್ ಮಾಡಿಕೊಡಲಾಗುವುದು. ರೀಫಿಲ್ ಮಾಡಿಕೊಂಡ 15 ದಿನಗಳ ನಂತರ ಇನ್ನೊಂದು ಗ್ಯಾಸ್ ರೀಫಿಲ್‌ಗೆ ಬುಕ್ಕಿಂಗ್ ಮಾಡಬಹುದು. ಇದಕ್ಕಾಗಿ ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ವಿತರಕರಲ್ಲಿ ನೋಂದಾಯಿಸಬೇಕು. ನೋಂದಾಯಿಸಿದ ಮೊಬೈಲ್ ಸಂಖ್ಯೆಯಿಂದ ಮಾತ್ರ ಬುಕ್ಕಿಂಗ್ ಮಾಡಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.