ಜಿಲ್ಲೆ

ಮುಂಡಗೋಡದಲ್ಲಿ ಸಿಲಿಂಡರ್ ಸೋರಿ ಮನೆ ಬೆಂಕಿಗಾಹುತಿ

ಬಸವರಾಜ ವೀರಪ್ಪ ಗರಗ

ಮುಂಡಗೋಡ: ಮನೆಯಲ್ಲಿದ್ದ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ತಗುಲಿ ದಿನಬಳಕೆಯ ವಸ್ತುಗಳು ಸೇರಿ ಮೇಲ್ಚಾವಣಿ ಸುಟ್ಟು ಕರಕಲಾದ ಘಟನೆ ತಾಲೂಕಿನ ಅರಶಿಣಗೇರಿ ಗ್ರಾಮದಲ್ಲಿ ಶುಕ್ರವಾರ ಜರುಗಿದೆ.

ಸಕ್ರವ್ವ ರವಿ ಲಮಾಣಿ ಎಂಬುವವರ ಮನೆ ಬೆಂಕಿಗಾಹುತಿಯಾಗಿದೆ. ಎಂದಿನಂತೆ ಆಡುಗೆ ಕೆಲಸ ಮುಗಿಸಿ ಮನೆಯಲ್ಲಿ ಕುಳಿತಾಗ ಮನೆಯ ಮೇಲ್ಛಾವಣಿಗೆ ಬೆಂಕಿ ಹೊತ್ತಿಕೊಂಡಿದೆ.

ಬೆಂಕಿ ನಂದಿಸಲು ಸಾಕಷ್ಟು ಪ್ರಯತ್ನಪಟ್ಟರೂ ಮನೆಯಲ್ಲಿನ ದಿನಬಳಕೆ ಸಾಮಗ್ರಿಗಳು, ಹಣ, ದಾಖಲೆ ಪತ್ರಗಳು ಸುಟ್ಟಿವೆ. ನಂತರ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿ ಹೆಚ್ಚಿನ ಪ್ರಮಾಣದ ಹಾನಿ ತಡೆದರು.

ಕಂದಾಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.