ಜಿಲ್ಲೆ

ಸಿಲಿಂಡರ್ ಸ್ಪೋಟ 8 ಮಂದಿಗೆ ಗಾಯ

ಗಂಗಾಧರ ಬಿ ವಿ
ಬಿಡದಿ: ಕಟ್ಟಡ ನಿರ್ಮಾಣದ ಕಾರ್ಮಿಕರು ತಾತ್ಕಾಲಿಕವಾಗಿ ನಿರ್ಮಾಣ ಮಾಡಿಕೊಂಡಿದ್ದ ಶೆಡ್ಡ್ ನಲ್ಲಿ ಸಿಲಿಂಡರ್ ನಿಂದ ಗ್ಯಾಸ್ ಲಿಕ್ ಹಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ 7 ಮಂದಿ ಕಾರ್ಮಿಕರಿಗೆ ಗಂಭೀರ ಸುಟ್ಟ ಗಾಯಗಳಾಗಿರುವ ಘಟನೆ ಬೀಮೇನಹಳ್ಳಿಯ ಬಳಿ ನಡೆದಿದೆ.
ಪಶ್ಚಿಮ ಬಂಗಾಳ ರಾಜ್ಯದ ಅಸನ್ ಮಲ್ಲಿಕ್, ಜಾಯಿದ್ ಅಲಿ, ಕಬ್ಜುಲ್ ಶೇಕ್, ಶಪೀಜುಲ್ ಶೇಕ್, ಜಿಯಾಬುರ್ ಶೇಕ್, ನೂರ್ ಜಮಲ್, ಮನ್ರೂಲ್ ಶೇಕ್ ಗಾಯಗೊಂಡ ಕಾರ್ಮಿಕರಾಗಿದ್ದಾರೆ. ಇವರೆಲ್ಲರೂ ಕೂಲಿ ಕೆಲಸಕ್ಕೆಂದು ಬಿಡದಿಗೆ ಬಂದಿದ್ದರು. ಬಿಮೇನಹಳ್ಳಿ ಬಳಿ ಎಲಿಗೆಂನ್ಸ್ ಹೆಸರಿನಲ್ಲಿ  ಐಶಾರಾಮಿ ವಿಲ್ಲಾಗಳನ್ನ ನಿರ್ಮಾಣ ಮಾಡಲಾಗುತ್ತಿದೆ. ಈ ಕಟ್ಟಡದ ಕಾರ್ಮಿಕರಾಗಿ ಕೆಲಸ ಮಾಡಿಕೊಂಡು ಅಲ್ಲೆ ಪಕ್ಕದಲ್ಲಿ ಕಬ್ಬಿಣದ ತಾತ್ಕಾಲಿಕ ಶೆಡ್ಡ್ ನಿರ್ಮಾಣ ಮಾಡಿಕೊಂಡಿದ್ದರು.
ಘಟನೆ ಹಿನ್ನೆಲೆ: ಎಂದಿನಂತೆ ಸೋಮವಾರ ಕೆಲಸ‌ ಮುಗಿಸಿಕೊಂಡು ಶೆಡ್ಡ್ ಬಳಿ ಬಂದು ರಾತ್ರಿ ಅಡುಗೆ ಮಾಡಿ ಊಟ ಮಾಡಿಕೊಂಡು ಮಲಗಿದ್ದಾರೆ. ಚಿಕ್ಕ ಶೆಡ್ಡ್ ನಲ್ಲೆ ಗ್ಯಾಸ್ ಸಿಲಿಂಡರ್ ಇಟ್ಟುಕೊಂಡು ಅಡುಗೆ ಮಾಡಿಕೊಳ್ಳುತ್ತಿದ್ದರು. ರಾತ್ರಿ ವೇಳೆ ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆಯಾಗಿದೆ. ಮಂಗಳವಾರ ಬೆಳಿಗ್ಗೆ ಓರ್ವ ಎದ್ದಿದ್ದಾನೆ ಆತನಿಗೆ ಸಿಲಿಂಡರ್ ಸೋರಿಕೆ ಆಗಿರುವ ಮುನ್ಸೂಚನೆ ಸಿಗದ ಹಿನ್ನೆಲೆಯಲ್ಲಿ ಬೀಡಿ ಹೊತ್ತಿಸಲು ಕಟ್ಟಿಪಟ್ಟಣದಿಂದ ಬೆಂಕಿ ಗೀರಿದ್ದಾನೆ. ಬೆಂಕಿ ಗೀರುತ್ತಿದಂತೆ ಕ್ಷಣಾರ್ಧದಲ್ಲೆ ಶೆಡ್ಡ್ ತುಂಬ ಬೆಂಕಿ ಹೊತ್ತಿಕೊಂಡಿದೆ.
ನಿದ್ದೆಯ ಮಂಪರಿನಲ್ಲಿದ್ದ ಎಲ್ಲರಿಗು ಬೆಂಕಿ ಹೊತ್ತಿಕೊಂಡು ಸುಟ್ಟ ಗಾಯಗಳಾಗಿವೆ. ಅಲ್ಲೆ ಪಕ್ಕದ ಶೆಡ್ಡ್ ಗಳಲ್ಲಿ ಇದ್ದವರು ಹೊರ ಬಂದು ಬೆಂಕಿ ನಂದಿಸಿದ್ದಾರೆ. ಇನ್ನೂ ಗಾಯಾಳುಗಳನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ.
ಘಟನಾ ಸ್ಥಳಕ್ಕೆ ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ, ಎಎಸ್ಪಿ ರಾಮಚಂದ್ರಯ್ಯ, ಡಿವೈಎಸ್ಪಿ ಶ್ರೀನಿವಾಸ್, ಸಿಪಿಐ ಶಂಕರ್ ನಾಯಕ್  ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.  ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.