ಜಿಲ್ಲೆ

ಸಿಲಿಂಡರ್ ಸ್ಫೋಟ-5 ಮನೆಗಳಿಗೆ ಬೆಂಕಿ

Uttara Kannada - Subash Hegde

ಕಾರವಾರ: ತಾಲೂಕಿನ ಮುದಗಾ ಕಾರ್ಮಿಕರ ಕಾಲನಿಯಲ್ಲಿ ಸಿಲಿಂಡರ್ ಸ್ಪೋಟವಾಗಿ ಬೆಂಕಿ ತಗುಲಿ 5 ಶೆಡ್ ಗಳು ಸುಟ್ಟಿವೆ.

ನೌಕಾನೆಲೆ‌ ಎರಡನೇ ಹಂತದ ವಿಸ್ತರಣೆ ಕಾಮಗಾರಿ ಕೈಗೊಂಡಿರುವ ನಾಗಾರ್ಜುನಾ ಕನ್ಸಟ್ರಕ್ಷನ್ ಕಂಪನಿ(ಎನ್ ಸಿಸಿ)ಕಾರ್ಮಿಕರು ವಾಸವಿರುವ ಬಿ2 ಸಾಲಿನಲ್ಲಿ ಬೆಂಕಿ ಕಾಣಿಸಿಕೊಂಡಿತು.

ಕಾರ್ಮಿಕರು ಹೊರಗೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಯತ್ನ ನಡೆಸಿದ್ದಾರೆ. ಅಷ್ಟರಲ್ಲಿ 5 ಶೆಡ್ ಗಳಿಗೆ ಬೆಂಕಿ ಆವರಿಸಿದೆ.