ಜಿಲ್ಲೆ

ತೌಕ್ತೇ ಚಂಡಮಾರುತ ಪ್ರಭಾವ ಕರಾವಳಿಯಲ್ಲಿ ಭಾರಿ ಗಾಳಿಮಳೆ

reportermng

ಮಂಗಳೂರು: ತೌಕ್ತೇ ಚಂಡಮಾರುತದ ಪ್ರಭಾವದಿಂದಾಗಿ ದ.ಕ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ.

ಶುಕ್ರವಾರ ಸಂಜೆಯಿಂದಲೆ ಅರಬ್ಬಿ ಸಮುದ್ರ ಅಬ್ಬರಿಸತೊಡಗಿದ್ದು ಶನಿವಾರ ಮುಂಜಾನೆಯಿಂದ ಭಾರಿ ಮಳೆಯಾಗುತ್ತಿದೆ. ಕರಾವಳಿಗೆ ಸೀಮಿತವಾಗದೆ ಜಿಲ್ಲೆಯ ಒಳಭಾಗದ ತಾಲೂಕುಗಳಲ್ಲೂ ಮಳೆ ಸುರಿದಿದೆ.

ಸದ್ಯ ಚಂಡಮಾರುತ ಪಾಕಿಸ್ತಾನದ ಕರಾಚಿ ಕಡೆಗೆ ಸಾಗುತ್ತಿದ್ದು ಭಾರತದ ಕರಾವಳಿಯಿಂದ ಭಾರಿ ಗಾಳಿ ಮಳೆಗಷ್ಟೇ ಸೀಮಿತವಾಗಲಿದೆ.

ಅಕಾಲಿಕ ಮಳೆಯಿಂದ ಮಂಗಳೂರು ನಗರದಲ್ಲಿ ನಡೆಯುತ್ತಿರುವ ಅನೇಕ ಕಾಮಗಾರಿಯ ಪ್ರದೇಶಗಳಲ್ಲಿ ನೀರು ನಿಂತಿದ್ದು ಕೆಲಸಕ್ಕೆ ಅಡಚಣೆ ಉಂಟಾಗಿದೆ.