ಕೋಟ: ಕೋಟ ಹೋಬಳಿ ಭಾಗದಲ್ಲಿ ಕೃಷಿ ಕಾಯಕಕ್ಕೆ ಚಂಡಮಾರುತ ಸಂಕಷ್ಟ ತಂದ್ದೊಡ್ಡಿದೆ. ರೈತರು ಬಿತ್ತನೆ ಬೀಜ ಖರೀದಿಸಿ ಉಳುಮೆ ಕಾರ್ಯ ಪೂರ್ಣಗೊಳಿಸಿ ಇನ್ನೇನು ಬಿತ್ತನೆ ಕಾರ್ಯ ಆರಂಭಿಸುವಷ್ಟರಲ್ಲಿ ವರುಣ ಆರ್ಭಟಿಸಿದ್ದಾನೆ.
ಮೇ 15ರ ನಂತರ ಬಿತ್ತನೆ ಕಾರ್ಯ ಆರಂಭಗೊಳಿಸಿದರೂ ಇದೀಗ ಅಕಾಲಿಕ ಚಂಡಮಾರುತ ಪ್ರಭಾವದಿಂದ ಬಿತ್ತನೆ ಕಾರ್ಯಗಳಿಲ್ಲದೆ ರೈತರು ಕೊರಗುವಂತೆ ಮಾಡಿದೆ. ಮಳೆ ಸ್ವಲ್ಪ ಹಿಮ್ಮುಖವಾದರೆ ಬಿತ್ತನೆ ಕಾರ್ಯಕ್ಕೆ ವೇಗ ಸಿಗಬಹುದು. ಇಲ್ಲದಿದ್ದಲ್ಲಿ ನಾಟಿ ಕಾರ್ಯ ಮತ್ತಷ್ಟು ವಿಳಂಬವಾಗಲಿದೆ.
ಹೊಳೆಯಂತಾಗಿದೆ ಕೃಷಿ ಭೂಮಿ: ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಗದ್ದೆಗಳಲ್ಲಿ ನೀರು ತುಂಬಿ ತುಳುಕುತ್ತಿದೆ. ಬಿತ್ತನೆ ಕಾರ್ಯಕ್ಕಾಗಿ ಊಳುಮೆ ಮುಗಿಸಿದ ರೈತ ಇದೀಗ ನೀರಿಳಿಸುವ ಯೋಚನೆ ಮಾಡುತ್ತಿದ್ದಾನೆ. ಇನ್ನೊಂದೆಡೆ ನಿರಂತರ ಮಳೆಯಿಂದಾಗಿ ನಾಟಿ ಕಾರ್ಯ ಮಾಡುವ ಗದ್ದೆಗಳು ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಳ್ಳದೆ ರೈತರು ಕಂಗೆಟ್ಟಿದ್ದಾರೆ. ಒಟ್ಟಿನಲ್ಲಿ ಮುಂಗಾರು ಪ್ರವೇಶದ ಭರದ ಖುಷಿಯಲ್ಲಿದ್ದ ಕೃಷಿಕ ಇದೀಗ ತಲೆಮೇಲೆ ಕೈ ಇಟ್ಟು ಕೂರುವಂತೆ ಮಾಡಿದೆ.
ಸಾಮಾನ್ಯವಾಗಿ ಸಾಂಪ್ರದಾಯಿಕ ಕೃಷಿ ಪದ್ಧತಿ ಈ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಅನುಸರಿಸುವ ರೈತ ಸಮುದಾಯ ಇದೀಗ ಮಾತಾವರಣ ವೈಪರೀತ್ಯದಿಂದ ಕಂಗೆಟ್ಟು ಕೃಷಿ ಕಾರ್ಯದಲ್ಲಿ ಬದಲಾವಣೆಯ ಮಾರ್ಗ ಅನುಸರಿಸುವಂತೆ ಮಾಡಿದೆ. ಹೆಚ್ಚಿನ ವ್ಯಾಪ್ತಿಯಲ್ಲಿ ಚಾಪೆ ನಾಟಿ, ಬಿತ್ತುವ ಪದ್ಧತಿ ವಿವಿಧ ಭಾಗಗಳಲ್ಲಿ ಪ್ರಸ್ತುತ ಅನುಸರಿಸುತ್ತಿದ್ದಾರೆ. ಸಾಂಪ್ರದಾಯಿಕ ನಾಟಿಕಾರ್ಯಕ್ಕೆ ಭತ್ತವನ್ನು ಬಿತ್ತಿ ಸಸಿಯಾದ ನಂತರ ಅದನ್ನು ಕೂಲಿಯಾಳುಗಳ ಮೂಲಕ ನಾಟಿ ಮಾಡುವುದು ಸರ್ವೇ ಸಾಮಾನ್ಯ ಆದರೆ ಅಕಾಲಿಕ ಚಂಡಮಾರುತದಿಂದ ಕೃಷಿ ಕಾರ್ಯದಲ್ಲಿ ವ್ಯತ್ಯಾಸ ಕಾಣುತ್ತಿರುವುದಂತು ಸತ್ಯ.
ಕೃಷಿಯಿಂದ ವಿಮುಖರಾಗುವ ಕಾಲಘಟ್ಟದಲ್ಲಿ ವಾತಾವರಣ ವೈಪರೀತ್ಯ ಎಂಬುವುದು ಕೃಷಿ ಕಾಯಕಕ್ಕೆ ದೊಡ್ಡ ಹೊಡೆತವಾಗಿದೆ. ಅಲ್ಲದೆ ಕೃಷಿ ಕಾರ್ಯಕ್ಕೆ ಮತ್ತಷ್ಟು ಸಂಕಷ್ಟ ತಪ್ಪಿದಲ್ಲ. ತನ್ಮೂಲಕ ಕೃಷಿ ಹೈನುಗಾರಿಕೆ ಇಂಥಹ ವಾತಾವರಣ ವ್ಯತ್ಯಾಸಗಳು ರೈತ ಸಮುದಾಯದ ನಿದ್ದೆಗೆಡಿಸುವಂತೆ ಮಾಡಿದೆ ಶಿವಮೂರ್ತಿ ಕೆ. ಕೋಟತಟ್ಟು ಪಡುಕರೆ ಕೃಷಿಕ https://www.vijayavani.net/narendra-ramachandra-memorial-award https://www.vijayavani.net/charity-given-to-the-undeserving-is-not-considered-great