ಜಿಲ್ಲೆ

ಬೈಕ್ ಡಿಕ್ಕಿಯಾಗಿ ಸೈಕಲ್ ಸವಾರ ಸಾವು

ಹಲಗೂರು: ಸಮೀಪದ ಗುಂಡಾಪುರ ಗೇಟಿನ ಬಳಿ ಸೈಕಲ್ಗೆ ಭಾನುವಾರ ಸಂಜೆ ಬೈಕ್ ಡಿಕ್ಕಿಯಾದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲಿ ಮತೃಪಟ್ಟದ್ದಾರೆ.

ಗುಂಡಾಪುರ ಗ್ರಾಮ ನಿವಾಸಿ ರಾಮಯ್ಯ(65) ಮೃತರು. ಕಾರ್ಯನಿಮಿತ್ತ ಹಲಗೂರಿಗೆ ಬಂದು ಸ್ವಗ್ರಾಮಕ್ಕೆ ವಾಪಸಾಗುವಾಗ ಗೇಟ್ ಅತಿ ವೇಗವಾಗಿ ಬಂದ ಬೈಕ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ರಾಮಯ್ಯ ಮೃತಪಟ್ಟಿದ್ದಾರೆ.

ಹಲಗೂರು ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ಲೋಕೇಶ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.