ಜಿಲ್ಲೆ

ಉಪ್ಪೂರಿನಲ್ಲಿ ಸೈಕ್ಲಿಂಗ್​ ಸ್ಪರ್ಧೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ರಾಜ್ಯ ಸೀನಿಯರ್​ ಒಲಂಪಿಕ್ಸ್​ ಗೇಮ್ಸ್​ ಅಂಗವಾಗಿ ಉಪ್ಪೂರು ಹೈಸ್ಕೂಲ್​ನಿಂದ ಶಾಂತಿವನ ಜಂಕ್ಷನ್​ವರೆ ಸೈಕ್ಲಿಂಗ್​ ಸ್ಪರ್ಧೆ ಭಾನುವಾರ ನಡೆಯಿತು. ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸ್ಪರ್ಧೆಗೆ ಚಾಲನೆ ನೀಡಿದರು. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ. ಅರುಣ್​, ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ ಮೊದಲಾದವರು ಉಪಸ್ಥಿತರಿದ್ದರು. 72 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು.

ಪುರುಷರ 40 ಕಿ.ಮೀ.ವಿಭಾಗದಲ್ಲಿ ವಿಜಯಪುರ ತಂಡ ಮೊದಲ ಸ್ಥಾನ ಪಡೆಯಿತು. ಬಾಗಲಕೋಟೆ ತಂಡ ದ್ವೀತಿಯ ಸ್ಥಾನ ಹಾಗೂ ಮೈಸೂರು ತಂಡ ತೃತೀಯ ಸ್ಥಾನ ಪಡೆಯಿತು. ಮಹಿಳೆಯರ 20 ಕಿ.ಮೀ. ಸ್ಫರ್ಧೆಯಲ್ಲಿ ವಿಜಯಪುರ ತಂಡ ಮೊದಲ ಸ್ಥಾನ, ಬೆಳಗಾವಿ ತಂಡ ದ್ವೀತಿಯ ಹಾಗೂ ಮೈಸೂರು ತಂಡ ತೃತೀಯ ಸ್ಥಾನ ಪಡೆದುಕೊಂಡಿತು. ಪುರುಷರ 50 ಕಿ.ಮೀ. ವೈಯಕ್ತಿಕ ವಿಭಾಗದಲ್ಲಿ ಬಾಗಲಕೋಟೆಯ ಅರುಣಾ ಲಮಾಣಿ ಪ್ರಥಮ, ಮೈಸೂರಿನ ಚರಿತ್​ ಗೌಡ ದ್ವೀತಿಯ, ಬೆಂಗಳೂರಿನ ನೈಲ್​ ಡಿ'ಸೋಜಾ ತೃತೀಯ ಸ್ಥಾನ ಪಡೆದುಕೊಂಡರು. ಮಹಿಳೆಯ 30 ಕಿ.ಮೀ. ವೈಯಕ್ತಿಕ ವಿಭಾಗದಲ್ಲಿ ವಿಜಯಪುರದ ಪಾಯಲ್​ ಚಾವನ್​ ಪ್ರಥಮ, ಬಾಗಲಕೋಟೆಯ ದನಂಮ್ಮಾ ಗೌರವ್​ ದ್ವೀತಿಯ ಹಾಗೂ ಮೈಸೂರಿನ ಗ್ಲಿಯಫನಾ ಡಿ'ಸೋಜಾ ತೃತೀಯ ಸ್ಥಾನ ಪಡೆದುಕೊಂಡರು.

ಬಿಲ್ಲುಗಾರಿಕೆ

ಮಣಿಪಾಲ ಎಂಜೆಸಿ ಕ್ರೀಡಾಂಗಣದಲ್ಲಿ ನಡೆದ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ 40 ಮಂದಿ ಮತ್ತು 20 ಮಂದಿ ಮಹಿಳೆಯರು ಭಾಗವಹಿಸಿದ್ದರು. ಪುರುಷರ ವಿಭಾಗದಲ್ಲಿ ಬೆಂಗಳೂರಿನ ಪ್ರಜ್ವಲ್​ ಸೂರ್ಯ ಚಿನ್ನದ ಪದಕ ಗಳಿಸಿದ್ದಾರೆ. ಚಾಮರಾಜನಗರದ ಮನು ಕೆ. ಬೆಳ್ಳಿ ಹಾಗೂ ಬೆಂಗಳೂರಿನ ರಾಜೇಶ್​ ಕಂಚಿನ ಪದಕ ಪಡೆದಿದ್ದಾರೆ. ಮಹಿಳಾ ವಿಭಾಗದಲ್ಲಿ ಬೆಂಗಳೂರಿನ ಅಶ್ಮಿತಾ ಕೇಶವ್​ ಚಿನ್ನದ ಪದಕ ಗಳಿಸಿದ್ದಾರೆ. ಸಿಂಚನಾ ಬೆಳ್ಳಿ, ಚೈತ್ರಾ ಕಂಚಿನ ಪದಕ ಪಡೆದಿದ್ದಾರೆ.

ಟೇಬಲ್​ ಟೆನ್ನಿಸ್​

ಟೇಬಲ್​ ಟೆನ್ನಿಸ್​ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಅಶ್ವಿನ್​ ಹನಗೂಡು ಚಿನ್ನ, ಸುದರ್ಶನ್​ ಕುಮಾರ್​ ಬೆಳ್ಳಿ, ಚೇತನ್​ ಮತ್ತು ಪ್ರೇಮಚಂದ್ರ ಕಂಚು ಗಳಿಸಿದ್ದಾರೆ. ಮಹಿಳಾ ವಿಭಾಗದಲ್ಲಿ ಅನನ್ಯಾ ಚಿನ್ನ, ಸಹನಾ ಬೆಳ್ಳಿ, ಆರ್ನಾ ಮತ್ತು ದೃಷ್ಟಿ ಕಂಚು ಪಡೆದಿದ್ದಾರೆ.