ರಾಯಚೂರು: ವಿಶ್ವ ಹೃದಯ ದಿನಾಚರಣೆ ಅಂಗವಾಗಿ ನಗರದಲ್ಲಿ ಬೆಟ್ಟದೂರು ಆಸ್ಪತ್ರೆಯಿಂದ ಹೃದಯ ಆರೈಕೆ ಮಾಡಿ, ಪ್ರೀತಿಸಿ ಎಂಬ ಘೋಷ ವಾಕ್ಯದೊಂದಿಗೆ ಶುಕ್ರವಾಋ ಸೈಕಲ್ ಜಾಗೃತಿ ಜಾಥಾ ನಡೆಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಬಿ.ನಿಖಿಲ್ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಹೃದಯದ ಪ್ರಮುಖ ಅಂಗವಾಗಿದೆ. ಹೃದಯವನ್ನು ಸೂಕ್ತ ರೀತಿಯಲ್ಲಿ ಆರೈಕೆ ಮಾಡುವುದರ ಜತೆಗೆ ಪ್ರೀತಿಯಿಂದ ನೋಡಿಕೊಂಡಾಗ ಮಾತ್ರ ಆರೋಗ್ಯದಿಂದ ಇರಲು ಸಾಧ್ಯವಾಗಲಿದೆ ಎಂದರು.
ಬೆಟ್ಟದೂರು ಆಸ್ಪತ್ರೆಯಿಂದ ಆರಂಭವಾದ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೃದಯ ಸಂರಕ್ಷಣೆ ಮತ್ತು ಆರೈಕೆ ಕುರಿತು ಘೋಷಣೆಗಳನ್ನು ಕೂಗಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಜಾಥಾದಲ್ಲಿ ವೈದ್ಯರಾದ ಡಾ. ಜಯಪ್ರಕಾಶ ಪಾಟೀಲ್, ಡಾ.ಸಕಲೇಶ ಪಾಟೀಲ್, ಡಾ.ಶರಣಗೌಡ ಪಾಟೀಲ್. ಡಾ.ರವಿ ಪಾಟೀಲ್, ಡಾ.ಮಂಜುನಾಥ ಹಟ್ಟಿ, ಡಾ.ಸುನೀಲ್, ಡಾ.ಬಾಲರಾಜ್, ಆಸ್ಪತ್ರೆ ವ್ಯವಸ್ಥಾಪಕ ಮಹಾಂತೇಶ ಸಜ್ಜನ್ ಪಾಲ್ಗೊಂಡಿದ್ದರು.