ತುಮಕೂರು: ಸಮಾಜದಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಂ ಸುರಕ್ಷತೆಗೆ ಸುಧಾರಿತ ಮತ್ತು ಪರಿಣಾಮಕಾರಿಯಾದಂತಹ ತಾಂತ್ರಿಕ ವ್ಯವಸ್ಥೆ ರೂಪುಗೊಳ್ಳಬೇಕಾಗಿದೆ ಎಂದು ಪಾಲಿಕೆ ಆಯುಕ್ತೆ
ಬಿ.ವಿ.ಅಶ್ವಿಜ ಹೇಳಿದರು.
ನಗರ ಹೊರವಲಯದ ಶ್ರೀ ಸಿದ್ಧಾರ್ಥ ಸ್ಕೂಲ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ "ಇ ಆಡಳಿತದ ಸುರಕ್ಷತೆ ಮತ್ತು ಸೈಬರ್ ಕ್ರೈಂ ವಸ್ತುಸ್ಥಿತಿ ಆಧುನಿಕ ಕೃತಕ ಬುದ್ಧಿಮತ್ತೆ' ವಿಷಯ ಕುರಿತ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಸೋಮವಾರ ಭಾಗವಹಿಸಿ ಮಾತನಾಡಿ, ಇತ್ತೀಚಿಗೆ ತಾಂತ್ರಿಕ ಕ್ಷೇತ್ರದಲ್ಲಿನ ಬದಲಾವಣೆಗಳಿಂದ ಮಾನವನಿಗೆ ಸಹಕಾರಿ, ಸಹಾಯದ ಜತೆಗೆ ಆರ್ಥಿಕ
ಅಪಾಯ ತಂದೊಡ್ಡುವ ಸಾಧ್ಯತೆಗಳಿವೆ ಎಂದರು.
ಬದಲಾಗುತ್ತಿರುವ ಆಧುನಿಕ ತಂತ್ರಜ್ಞಾನದಿಂದ ಸೈಬರ್ ಕ್ರೈಂ ನಂತಹ ಅಪಾಯಗಳು ಜನಸಾಮಾನ್ಯರನ್ನ ಕಾಡುತ್ತಿದ್ದು, ತ್ವರಿತವಾಗಿ ಇದಕ್ಕೆ ಪರಿಣಾಮಕಾರಿ ಸುಧಾರಿತ
ತಂತ್ರಜ್ಞಾನ ಅವಶ್ಯಕತಯಿದೆ. ಇದಕ್ಕಾಗಿ ಹಲವು ರೀತಿ ಸಂಶೋಧನೆಗಳನ್ನು ಕೈಗೊಳ್ಳಲಾಗಿದೆ. ಸುಧಾರಿತ ತಾಂತ್ರಿಕ ವ್ಯವಸ್ಥೆ ಬಳಸಿಕೊಂಡು ತುಮಕೂರು ನಗರವನ್ನ ಸುರಕ್ಷಿತ ನಗರವನ್ನಾಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿದೆ ಎಂದರು. ತುಮಕೂರು ನಗರವನ್ನ ಆಕರ್ಷಣೀಯ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸಲು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರು ಅನೇಕ ರೀತಿಯ ಯೋಜನೆ ಮತ್ತು ಅನುದಾನಗಳನ್ನು ಕಲ್ಪಿಸಿದ್ದು, ಅಮಾನಿ ಕೆರೆಯಲ್ಲಿ ಗಾಜಿನ ಸೇತುವೆ ನಿಮಾರ್ಣ, ಸುಸಜ್ಜಿತ ಅಧುನಿಕ ಶೈಲಿಯ ಖಾಸಗಿ ಬಸ್ ನಿಲ್ದಾಣ, ಸುಸಜ್ಜಿತ ಚರಂಡಿ, ರಸ್ತೆ, ಯುಜಿಡಿ ಸಂಪರ್ಕ, ಪಾರ್ಕ್ ನಿಮಾರ್ಣ, ಅಕ್ಕ&ತಂಗಿ ಕೆರೆಯಲ್ಲಿ ವಿಶೇಷ ಸಸ್ಯ ಕಾಶಿ ನಿಮಾರ್ಣಕ್ಕೆ ಹಸಿರುನಿಶಾನೆ ತೋರಿದ್ದಾರೆ. ನಗರದ ಅಭಿವೃದ್ಧಿ ಜತೆಗೆ ಸಾರ್ವಜನಿಕರ ಸಂರಕ್ಷಣೆಗಾಗಿ ತಾಂತ್ರಿಕವಾಗಿ ಅನೇಕ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಅಸ್ತಾಕ್ಷ ಲ್ಯಾಬ್ ಪ್ರವೇಟ್ ಲಿಮಿಟೆಡ್ ನ ಸಿಇಒ ಕಿಶೋರ್ ಮಾತನಾಡಿ, ತಾಂತ್ರಿಕತೆ ಬೆಳದಂತೆ ಅನೇಕ ಅಪಾಯಕಾರಿ ಸಮಸ್ಯೆಗಳು ಎದುರಾಗುತ್ತಿವೆ. ಹೊಸದಾಗಿ ಬಂದಿರುವ ಬೈಜಿಕ್ ತಂತ್ರಜ್ಞಾನದಿಂದಾಗಿ ಹ್ಯಾಕಿಂಗ್ ಸಮಸ್ಯೆ ಎದುರಾಗುತ್ತಿವೆ. ಸಾರ್ವಜನಿಕರು ತಮ್ಮ ಸ್ಮಾರ್ಟ್ ಸಾಧನ ಸಲಕರಣೆಗಳನ್ನು ಸುರಕ್ಷಿತವಾಗಿಡಲು ಅನೇಕ ತಂತ್ರಜ್ಞಾನಗಳು ಬರುತ್ತಿದ್ದು, ಹ್ಯಾಕಿಂಗ್ನಿಂದ ಮುಕ್ತಿ ಹೊಂದಬಹುದಾಗಿದೆ. ಜನಸಾಮಾನ್ಯರಿಗೆ ಡಿಜಿಟಲ್ ಬಳಕೆ ಬಗ್ಗೆ ಹೆಚ್ಚು ತಿಳಿವಳಿಕೆ ನೀಡಬೇಕಿದ್ದು, ಇಂತಹ ಕಾರ್ಯಾಗಾರಗಳು ಚರ್ಚಾ ವಿಚಾರಗಳು ತುಂಬಾ ಅವಶ್ಯಕ ಎಂದರು. ಶ್ರೀ ಸಿದ್ಧಾರ್ಥ ಸ್ಕೂಲ್ ಆಫ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಸಂಜೀವ್ ಕುಮಾರ್, ಕಂಪ್ಯೂಟರ್ ಸೈನ್ಸ್ ಎಚ್ಒಡಿ ಡಾ.ರೇಖಾ, ಅಸ್ತಾಕ್ಷ ಲ್ಯಾಬ್ ಲಿಮಿಟೆಡ್ ಡಾ. ಗಿರೀಶ್, ವಾಸೀಮ್ವುದ್ದೀನ್, ಎಚ್.ಎಂ.ರಾಜೇಶ್ ಉಪಸ್ಥಿತರಿದ್ದರು.