ಕುಂದಾಪುರ: ಸೈಬರ್ ಅಪರಾಧಗಳು ನಡೆದಾಗ 1930 ಸಹಾಯವಾಣಿಗೆ ತಕ್ಷಣ ಕರೆ ವಾಡಿದರೆ ಸುಲಭದಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚಬಹುದು. ಕಳಕೊಂಡ ಹಣ ಪಡೆಯಬಹುದು. ತುರ್ತು ಸಂದರ್ಭದಲ್ಲಿ 112 ಸಹಾಯವಾಣಿಗೆ ಕರೆ ವಾಡಿದರೆ ಪೊಲೀಸರು ತಕ್ಷಣ ನಿಮ್ಮ ನೆರವಿಗೆ ಬರಲಿದ್ದಾರೆ ಎಂದು ಡಿವೈಎಸ್‌ಪಿ ಎಚ್.ಡಿ.ಕುಲಕರ್ಣಿ ಹೇಳಿದರು.
ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿ ಉಡುಪಿ ಜಿಲ್ಲಾ ಪೊಲೀಸ್, ರಾಷ್ಟ್ರೀಯ ಸೈಬರ್ ಸಹಾಯವಾಣಿ ಸಹಯೋಗದಲ್ಲಿ ಸೈಬರ್ ಅಪರಾಧ, ತುರ್ತು ಸಂಪರ್ಕ ಜಾಗೃತಿ, ಪೊಲೀಸ್ ಜಾಗೃತಿ ಜಾಥಾಕ್ಕೆ ಸೋಮವಾರ ಚಾಲನೆ ನೀಡಿ ವಾತನಾಡಿದರು.
ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಸಿ.ಪಿ.ಜಯರಾಮ ಗೌಡ, ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ನೀಲೇಶ್ ಚೌಹಾಣ್, ಕುಂದಾಪುರ ಎಸ್‌ಐ ನಂಜಾ ನಾಯ್ಕ, ಸಂಚಾರ ಠಾಣೆ ಎಸ್‌ಐ ನೂತನ್, ಗ್ರಾವಾಂತರ ಎಸ್‌ಐ ಭೀವಾಶಂಕರ್, ಕೊಲ್ಲೂರು ಎಸ್‌ಐ ವಿನಯ್ ಕೊರ್ಲಹಳ್ಳಿ, ಶಂಕರನಾರಾಯಣ ಎಸ್‌ಐ ಐ.ಆರ್.ಗಡ್ಕೇಕರ್, ಅವಾಸೆಬೈಲು ಎಸ್‌ಐ ಅಶೋಕ್ ಕುವಾರ್, ಬೈಂದೂರು ಎಸ್‌ಐ ತಿಮ್ಮೇಶ್, ಗಂಗೊಳ್ಳಿ ಎಸ್‌ಐ ಪವನ್ ನಾಯಕ್ ಮೊದಲಾದವರು ಇದ್ದರು.