Cyberabad Police Case 
ಜಿಲ್ಲೆ

ಉನ್ನತ ಪೊಲೀಸ್ ಅಧಿಕಾರಿಗಳೆಂದು ವಂಚಿಸುತ್ತಿದ್ದ ಗ್ಯಾಂಗ್ ಪೊಲೀಸ್ ಬಲೆಗೆ

ಬೆಂಗಳೂರು: ಉನ್ನತ ಪೊಲೀಸ್ ಅಧಿಕಾರಿಗಳು, ಮಾನವ ಹಕ್ಕುಗಳ ಆಯೋಗದ ಸದಸ್ಯರು ಎಂದು ಹೇಳಿಕೊಂಡು ಶ್ರೀಮಂತ ಉದ್ಯಮಿಗಳಿಗೆ ಚಂಚಿಸುತ್ತಿದ್ದ ಖತರನಾಕ್ ಗ್ಯಾಂಗ್​ ಒಂದನ್ನು ಆಂಧ್ರಪ್ರದೇಶದ ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ.

ವಿಜಯ್ ಕುಮಾರ್ ರೆಡ್ಡಿ, ಸ್ಮರ್ತಿ ಸಿಂಹ, ರಾಘವರೆಡ್ಡಿ, ರಣದೀರ್ ರೆಡ್ಡಿ, ಅಭಿಲಾಶ್ ರೆಡ್ಡಿ, ಪ್ರವಾಲಿಕ ಬಂಧಿತ ಆರೋಪಿಗಳು. ಎಲ್ಲರೂ ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿರುವುದಾಗಿ ಬಿಂಬಿಸಿಕೊಂಡಿದ್ದ ತಂಡ, ಅದೇ ರೀತಿ ಟ್ರ್ಯಾವೆಲ್ ಬ್ಯುಸ್​​ನೆಸ್ ಮಾಡುವುದಾಗಿ ಹೇಳಿಕೊಂಡಿದ್ದ ಕಿಲಾಡಿಗಳು, 72 ಬಸ್ ಹಾಗೂ 32 ಎಕರೆ ಪಾರ್ಕಿಂಗ್ ಲಾಟ್ ಹೊಂದಿರುವುದಾಗಿ ಹೇಳಿಕೊಂಡಿದ್ದರು.

ಈ ರೀತಿ ಉದ್ಯಮಿ ವೀರಾ ರೆಡ್ಡಿಯನ್ನ ಟ್ರ್ಯಾಪ್ ಮಾಡಿದ್ದ ತಂಡ, ಬೆಂಗಳೂರು ಸೆಂಟ್ರಲ್ ಡಿಸಿಪಿ ಎಂದು ಪರಿಚಯ ಮಾಡಿಕೊಂಡು ವಂಚನೆ ಮಾಡಿದ್ದರು. ಸುಳ್ಳು ಸುಳ್ಳು ಪ್ರಕರಣ ದಾಖಲಿಸುವುದಾಗಿ ಧಮ್ಕಿ ಹಾಕಿ ಉದ್ಯಮಿ ವೀರಾ ರೆಡ್ಡಿಯಿಂದ 11 ಕೋಟಿ ಲೂಟಿ ಹೊಡೆದಿದ್ದರು.

ಈ ಕುರಿತು ಬಚುಪಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ವಿಜಯ್ ಕುಮಾರ್ ರೆಡ್ಡಿ ಆತ್ಮಹತ್ಯೆಗೆ ಶರಣಾಗಿದ್ದ. ಪ್ರಕರಣ ಸಂಬಂದ ಆರೋಪಿಗಳನ್ನ ಬಂಧಿಸಿರುವ ಪೊಲೀಸರು, ಬಂಧಿತರಿಂದ 3 ಐಷಾರಾಮಿ ಬಿಎಂಡ್ಬ್ಲು ಕಾರ್, 2 ಫೋರ್ಡ್ ಕಾರು, 7 ಮೊಬೈಲ್, 50 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 2 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. (ವಿಜಯವಾಣಿ ಸುದ್ದಿಜಾಲ)