ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ಸಂಸ್ಥೆಯ ಬಿಜನೆಸ್ ಅಡ್ಮಿನಿಸ್ಟ್ರೆಟಿವ್ ಕಾಲೇಜಿನಲ್ಲಿ ದ್ವೀತಿಯ ಸೆಮಿಸ್ಟರ್ ವಿದ್ಯಾರ್ಥಿಗಳಿಗಾಗಿ ಸೈಬರ್ ಸೆಕ್ಯುರಿಟಿ ಕುರಿತು ಸೆಮಿನಾರ್ ಏರ್ಪಡಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಧಾರವಾಡದ ನ್ಯಾಷನಲ್ ಫೊರೆನ್ಸಿಕ್ ಸೈನ್ಸಸ್ ಯುನಿವರ್ಸಿಟಿಯ ಸಹಾಯಕ ಪ್ರಾಧ್ಯಾಪಕ ಕೌಶಿಕ್ ಜಿಎನ್ ಮಾತನಾಡಿ, ಸೈಬರ್ ಅಪರಾಧಗಳು, ಸುರಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು.
ಫೇಕ್ ಲಿಂಕ್ ಅಥವಾ ವೆಬ್ ಸೈಟ್ ಗಳಿಂದ ದೂರ ಇರಬೇಕು. ಯಾವುದೇ ಲಿಂಕ್ ಒತ್ತುವ ಮೊದಲು ಸೈಬರ್ ಸುರಕ್ಷತೆ ವಿಷಯಗಳನ್ನು ಅರಿತುಕೊಳ್ಳುವುದು ಅಗತ್ಯ ಎಂದು ಸಲಹೆ ನೀಡಿದರು.
ಇವೆಂಟ್ ಕೋಆಡಿರ್ನೇಟರ್ ಪ್ರೊ. ಜಸಲೀನೆ ಕುರೆಟಿ ಇದ್ದರು.