ಹಾವೇರಿ: 54 ಸಾವಿರ ರೂ. ಲಾಭ ಕೊಟ್ಟು 58.84 ಲಕ್ಷ ರೂ. ಮೋಸ ಮಾಡಿದ ಘಟನೆ ಕುರಿತು ಇಲ್ಲಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಣೆಬೆನ್ನೂರ ನಗರದ ದೊಡ್ಡಪೇಟೆ ನಿವಾಸಿ ವಿನಾಯಕ ಚನ್ನಬಸಪ್ಪ ಜಂಬಗಿ (30) ಮೋಸ ಹೋದವರು.
ಇವರಿಗೆ ಜಂಬಿನ್ ಪ್ರೋ ಟ್ರೇಡಿಂಗ್ ಕಂಪನಿಯಿಂದ ಸುನಿತಾ ಸಿಂಗ್ ಎಂಬುವಳು ಫೋನ್ ಮಾಡಿ ನಮ್ಮಲ್ಲಿ ಹೂಡಿಕೆ ಮಾಡಿದರೆ ಶೇ. 4ರಿಂದ 5ರಷ್ಟು ಲಾಭಾಂಶ ನೀಡಲಾಗುವುದು ಎಂದು ನಂಬಿಸಿ ಮೊದಲಿಗೆ 54 ಸಾವಿರ ರೂ. ಲಾಭಾಂಶ ನೀಡಿದ್ದಾರೆ. ನಂತರ ವಿನಾಯಕ ಅವರಿಂದ 58.84 ಲಕ್ಷ ರೂ. ಹಾಕಿಸಿಕೊಂಡು ಅಸಲು ಹಾಗೂ ಲಾಭದ ಹಣ ನೀಡದೆ ಮೋಸ ಮಾಡಿದ್ದಾಳೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.