ಜಿಲ್ಲೆ

ಮಹಿಳಾ ಲೋಕೋ ಪೈಲೆಟ್​ಗೆ ವಂಚನೆ

ಹುಬ್ಬಳ್ಳಿ: ರೈಲ್ವೆ ಇಲಾಖೆಯ ಮಹಿಳಾ ಲೋಕೋ ಪೈಲೆಟ್​ವೊಬ್ಬರ ಕ್ರೆಡಿಟ್​ ಕಾರ್ಡ್​ ಮಾಹಿತಿ ಕದ್ದು, ಅವರಿಗೆ ಗೊತ್ತಾಗದಂತೆ 57 ಸಾವಿರ ರೂ. ವಂಚಿಸಿದ್ದಾರೆ.
ಜಾರ್ಖಂಡ್​ ಮೂಲದ ಇಲ್ಲಿನ ಹಾಸನ ಜಿಲ್ಲೆಯ ಅರಸಿಕೆರೆ ನಿವಾಸಿ ಜ್ಯೋತಿಕುಮಾರ ಠಾಕೂರ ವಂಚನೆಗೀಡಾದವರು. ಜ್ಯೋತಿ ಅವರು ಕರ್ತವ್ಯದ ವೇಳೆ ಗದಗ ರಸ್ತೆಯ ಆರ್​ಪಿಎ್​ ವಿಶ್ರಾಂತಿ ಗೃಹದಲ್ಲಿದ್ದಾಗ ಕ್ರೆಡಿಟ್​ ಕಾರ್ಡ್​ ಮಾಹಿತಿ ಕದ್ದ ವಂಚಕರು ಅವರಿಗೆ ಒಟಿಪಿ ಕಳುಹಿಸಿದ್ದಾರೆ. ನಂತರ ಅವರ ಗಮನಕ್ಕೆ ಬಾರದಂತೆ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಸೈಬರ್​ ಕೆಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.