ಹುಬ್ಬಳ್ಳಿ: "ಈ ಕೂಡಲೇ ಬ್ಯಾಂಕ್ ಖಾತೆಗೆ ಪಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳದಿದ್ದರೆ ನಿಮ್ಮ ಬ್ಯಾಂಕ್ ಖಾತೆ ಬಂದ್ ಆಗುತ್ತದೆ' ಎಂದು ನಿವೃತ್ತ ನೌಕರರೊಬ್ಬರಿಗೆ ಸಂದೇಶದ ಮುಖಾಂತರ ಲಿಂಕ್ ಕಳುಹಿಸಿ, 73,007 ರೂ. ವಂಚಿಸಿದ್ದಾರೆ.
ವಿದ್ಯಾನಗರದ ರವಿಕುಮಾರ ಎಂಬುವರ ಮೊಬೈಲ್ ೋನ್ಗೆ ಇತ್ತೀಚೆಗೆ ಅಪರಿಚಿತರು ಸಂದೇಶ ಕಳುಹಿಸಿದ್ದರು. ಇದರಲ್ಲಿರುವ ಲಿಂಕ್ ಮೂಲಕ ಬ್ಯಾಂಕ್ ಖಾತೆಗೆ ಪಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದರು. ಇದನ್ನು ನಂಬಿದ ರವಿಕುಮಾರ ಅವರು ಲಿಂಕ್ ಕ್ಲಿಕ್ ಮಾಡಿದಾಗ ನೆಟ್ ಬ್ಯಾಂಕಿಂಗ್ ಪೇಜ್ ಓಪನ್ ಆಗಿತ್ತು. ಅದರಲ್ಲಿ ಯೂಸರ್ ನೇಮ್ ಹಾಗೂ ಪಾಸ್ವರ್ಡ್ ಹಾಕಿದ್ದರು. ನಂತರ ಬಂದ ಮೂರು ಒಟಿಪಿಗಳನ್ನೂ ಹಾಕಿದ್ದರು. ಈ ಮೂಲಕ ವಂಚಕರು ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಹು&ಧಾ ಸೈಬರ್ ಕೆಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.