ಜಿಲ್ಲೆ

ಸೈಬರ್ ಅಪರಾಧ 78.78 ಲಕ್ಷ ರೂ. ವಂಚನೆ


ಮಂಗಳೂರು: ಆನ್‌ಲೈನ್ ಹೂಡಿಕೆ ಹಾಗೂ ಪಾರ್ಟ್ ಟೈ ಉದ್ಯೋಗದ ಹೆಸರಿನಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 78.78 ಲಕ್ಷ ರೂ. ವಂಚನೆಗೊಳಗಾದ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಆನ್‌ಲೈನ್ ಸ್ಟಾಕ್ ಟ್ರೇಡಿಂಗ್ ಆ್ಯಪ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭಾಂಶ ಗಳಿಸಬಹುದು ಎಂಬ ಸಂದೇಶವನ್ನು ನೋಡಿದ ವ್ಯಕ್ತಿಯೋರ್ವರು ಜ.16ರಿಂದ ಫೆ.3ರವರೆಗೆ ಒಟ್ಟು 39.40 ಲ.ರೂ.ಗಳನ್ನು ಹೂಡಿಕೆ ಮಾಡಿದ್ದರು. ಆದರೆ ಅವರಿಗೆ ಯಾವುದೇ ಹಣ ವಾಪಸ್ ನೀಡದೆ ವಂಚಿಸಲಾಗಿದೆ.


ಇನ್ನೊಂದು ಪ್ರಕರಣದಲ್ಲಿ ವಾಟ್ಸ್‌ಆ್ಯಪ್‌ಗೆ ಬಂದ ಸಂದೇಶವನ್ನು ನೋಡಿ ಟೆಲಿಗ್ರಾಂ ಆ್ಯಪ್‌ಗೆ ಸೇರ್ಪಡೆಯಾಗಿದ್ದ ವ್ಯಕ್ತಿಯೋರ್ವರಿಗೆ ಗೂಗಲ್ ರಿವೀವ್ ಹೆಸರಿನ ಟಾಸ್ಕ್ ನೀಡಲಾಗಿತ್ತು. ಅಧಿಕ ಲಾಭಾಂಶ ಪಡೆಯುವುದಕ್ಕೆ ಹೆಚ್ಚು ಹೂಡಿಕೆ ಮಾಡುವಂತೆ ತಿಳಿಸಲಾಗಿತ್ತು. ಇದನ್ನು ನಂಬಿ ಜ.25ರಿಂದ ಫೆ.21ರವರೆಗೆ ಹಂತ ಹಂತವಾಗಿ ಹಣ ಹೂಡಿಕೆ ಮಾಡಿದ್ದರು. ಅವರಿಗೆ ಯಾವುದೇ ಲಾಭಾಂಶವಾಗಲಿ, ಹೂಡಿಕೆ ಮಾಡಿದ ಹಣವನ್ನಾಗಲಿ ಹಿಂತಿರುಗಿಸದೆ ವಂಚಿಸಲಾಗಿದೆ.