ಉಡುಪಿ: ಸಾರ್ವಜನಿಕರಂಗದ ಪ್ರಮುಖ ಉದ್ಯಮ ಎಚ್‌ಪಿಸಿಎಲ್ (ಹಿಂದೂಸ್ತಾನ್ ಪೆಟ್ರೋಲ್ ಕಾರ್ಪೋರೇಶನ್ ಲಿಮಿಟೆಡ್) ಸರ್ವರ್ ಮೇಲೆ ಸೈಬರ್ ದಾಳಿ ಶಂಕೆ ವ್ಯಕ್ತವಾಗಿದೆ. ಕಳೆದ ೨ ದಿನಗಳಿಂದ ಆನ್ಲೆöÊನ್ ಮೂಲಕ ಯಾವುದೇ ಬುಕ್ಕಿಂಗ್ ಹಾಗೂ ಡೀಲರ್‌ಗಳಿಗೆ ಆರ್ಡರ್ ನೀಡಲು ಸಾಧ್ಯವಾಗದೆ ಪರದಾಡುವಂತಾಗಿದೆ. ಇದರಿಂದಾಗಿ ಭಾರತದಾದ್ಯಂತ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
ಭಾರತ ಪಾಕಿಸ್ತಾನದ ವಿರುದ್ಧ ಅಪರೇಶನ್ ಸಿಂಧೂರ ಕಾರ್ಯಚರಣೆ ನಡೆಸಿದ ಬಳಿಕ ಈ ಬೆಳವಣಿಗೆ ನಡೆದಿದ್ದು, ಆದರೆ ಕಂಪೆನಿ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಅಧಿಕಾರಿಗಳೂ ಕೂಡ ಕರೆ ಸ್ವೀಕರಿಸುತ್ತಿಲ್ಲ. ಈ ಘಟನೆ ಬಳಿಕ ಸಾರ್ವಜನಿಕರಂಗದ ಆಯಿಲ್ ಕಂಪೆನಿಗಳು ಹೆಚ್ಚಿನ ಜಾಗೃತೆ ವಹಿಸುವಂತೆ ಪೆಟ್ರೋಲಿಯಂ ಇಲಾಖೆ ಸಲಹೆ ನೀಡಿದೆ ಎಂಬುದಾಗಿ ತಿಳಿದುಬಂದಿದೆ.
ಕಾಟಿಪಳ್ಳ ಪ್ಲಾಂಟ್‌ನಲ್ಲಿ ಕ್ಯೂ
ಉಡುಪಿ ಜಿಲ್ಲೆಯಲ್ಲಿ ೭ ಅಧಿಕೃತ ಡೀಲರ್‌ಗಳು ಮನೆ, ಹೋಟೆಲ್, ಶಾಲೆಗಳು ಸೇರಿದಂತೆ ಲಕ್ಷಕ್ಕೂ ಅಧಿಕ ಗ್ಯಾಸ್ ಸಂಪರ್ಕ ನೀಡಿದ್ದು, ಸರ್ವರ್ ಸಮಸ್ಯೆಯಿಂದ ಗ್ಯಾಸ್ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಕೆಲವು ಡೀಲರ್‌ಗಳಲ್ಲಿ ಗ್ಯಾಸ್ ಸಿಲಿಂಡರ್‌ಗಳು ಪೂರ್ತಿಯಾಗಿ ಖಾಲಿಯಾಗಿದ್ದು, ಗ್ರಾಹಕರಿಗೆ ಪೂರೈಸಲು ಸಾಧ್ಯವಾಗಿಲ್ಲ. ಬಿಲ್ ಮಾಡಲು ಸಾಧ್ಯವಾಗದ ಕಾರಣ ಕಲ್ಯಾಣ ಮಂಟಪ, ಹೋಟೆಲ್‌ಗಳಿಗೆ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ನೀಡಲು ಪರದಾಡುವಂತಾಗಿತ್ತು. ಕಾಟಿಪಳ್ಳದಲ್ಲಿರುವ ಎಚ್‌ಪಿಸಿಎಲ್ ಗ್ಯಾಸ್ ರೀಫಿಲಿಂಗ್ ಪ್ಲಾಂಟ್‌ನಲ್ಲಿ ಲಾರಿಗಳು ಸರತಿಸಾಲಿನಲ್ಲಿ ನಿಂತಿದ್ದವು. ಗುರುವಾರ ಮಧ್ಯಾಹ್ನ ಬಳಿಕ ಸ್ವಲ್ಪ ಪ್ರಮಾಣದಲ್ಲಿ ಗ್ಯಾಸ್ ಫಿಲಿಂಗ್ ಕಾರ್ಯ ಪ್ರಾರಂಭವಾಗಿದೆ. ಇದೇ ರೀತಿ ಪೆಟ್ರೋಲ್ ಪಂಪ್‌ಗಳಿಗೂ ಪೆಟ್ರೋಲ್ ಮತ್ತು ಡಿಸೇಲ್ ಪೂರೈಕೆಯಾಗಿಲ್ಲ.