ರಾಯಚೂರಿನ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಿ.ವಿ.ರಾಮನ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವ ಎನ್.ಎಸ್.ಬೋಸರಾಜು, ಜಿಲ್ಲಾಕಾರಿ ಚಂದ್ರಶೇಖರ ನಾಯಕ, ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದ ನಿರ್ದೇಶಕಿ ಕೆ.ಎ.ಸಾಧನಾ, ವಿಜ್ಞಾನಿ ವಿಶ್ವಕೀರ್ತಿ, ಡಿಡಿಪಿಐ ಸುರೇಶ ಹುಗ್ಗಿ, ವಿಜ್ಞಾನ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಸಿ.ಡಿ.ಪಾಟೀಲ್, ಸಿ.ವಿ.ಪಾಟೀಲ್, ಕೇಂದ್ರದ ಸಮನ್ವಯಾಕಾರಿ ಅಜೀತ್ ಇದ್ದರು. 
ಜಿಲ್ಲೆ

ದೇಶಕ್ಕೆ ಸಿವಿ ರಾಮನ್ ಕೊಡುಗೆ ಅಪಾರ

ರಾಯಚೂರು: ಭಾರತಕ್ಕೆ ಮೊಟ್ಟ ಮೊದಲ ನೋಬೆಲ್ ಪ್ರಶಸ್ತಿ ತಂದು ಕೊಟ್ಟ ವಿಜ್ಞಾನಿ ಸಿ.ವಿ.ರಾಮನ್ ದೇಶ ಮತ್ತು ವಿಜ್ಞಾನ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರವಾಗಿದ್ದು, ಅವರ ಜೀವನ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕವಾಗಿದೆ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ನಗರದ ಹೊರವಲಯದಲ್ಲಿನ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸರ್ ಸಿ.ವಿ.ರಾಮನ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಡ ಕುಟುಂಬದಲ್ಲಿ ಜನಿಸಿದರು ತಮ್ಮ ನಿರಂತರ ಪರಿಶ್ರಮದಿಂದ ಕಠಿಣ ಸವಾಲುಗಳನ್ನು ದಾಟಿ ವಿಜ್ಞಾನ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಕಾರಿ ಚಂದ್ರಶೇಖರ ನಾಯಕ, ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದ ನಿರ್ದೇಶಕಿ ಕೆ.ಎ.ಸಾಧನಾ, ವಿಜ್ಞಾನಿ ವಿಶ್ವಕೀರ್ತಿ, ಡಿಡಿಪಿಐ ಸುರೇಶ ಹುಗ್ಗಿ, ವಿಜ್ಞಾನ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಸಿ.ಡಿ.ಪಾಟೀಲ್, ಸಿ.ವಿ.ಪಾಟೀಲ್, ಕೇಂದ್ರದ ಸಮನ್ವಯಾಕಾರಿ ಅಜೀತ್ ಉಪಸ್ಥಿತರಿದ್ದರು.