ಜಿಲ್ಲೆ

ಟೇಪು ಕತ್ತರಿಸೋದು ಶೋಭೆಯಲ್ಲ

Ramanagara

ಮಾಗಡಿ: ಯಾರೋ ಮಾಡಿದ ಕೆಲಸಕ್ಕೆ ಟೇಪು ಕತ್ತರಿಸಿ ಹೋಗುವುದು ಶೋಭೆಯಲ್ಲ ಎಂದು ಡಿಸಿಎಂ ಅಶ್ವತ್ಥನಾರಾಯಣ ಹಾಗೂ ಶಾಸಕ ಮಂಜುನಾಥ್ ವಿರುದ್ಧ ಸಂಸದ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕತೋರೆಪಾಳ್ಯದಲ್ಲಿ ತಾಂಡಾ ಅಭಿವೃದ್ಧಿ ನಿಗಮದ ಅನುದಾನದಡಿ ನಿರ್ವಿುಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಜತೆ ಸೇರಿಕೊಂಡು ಶಾಸಕರು ರಾಜಕಾರಣ ಮಾಡುತ್ತೇನೆ ಎಂದರೆ ಬೇಡ ಎನ್ನಲು ಸಾಧ್ಯವೇ? ನಾನೊಂದು ಪಕ್ಷ, ಶಾಸಕರು ಒಂದು ಪಕ್ಷ, ಉಪಮುಖ್ಯಮಂತ್ರಿ ಒಂದು ಪಕ್ಷದವರು. ಎಲ್ಲರಿಗೂ ರಾಜಕಾರಣವೇ ಮುಖ್ಯವಾಗಿದೆ. ಯಾರ್ಯಾರು ಏನೇನು ಮಾಡುತ್ತಾರೆ ನೋಡೋಣ ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ವಿರುದ್ಧ ಪರೋಕ್ಷವಾಗಿ ಟೀಕೆ ಮಾಡಿದರು.

ತಾಲೂಕಿನ ವಿವಿಧೆಡೆ ಕಾಮಗಾರಿಗಳ ಉದ್ಘಾಟನೆಗೆ ಡಿಸಿಎಂ ಬರುತ್ತಿದ್ದರೂ, ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸದಿರುವುದು ಸಂಸದರ ಆಕ್ರೋಶಕ್ಕೆ ಕಾರಣವಾಗಿತ್ತು. ತಾಪಂ ಅಧ್ಯಕ್ಷ ಸಿ. ನಾರಾಯಣಪ್ಪ ಮಾತನಾಡಿದರು. ಜಿಪಂ ಅಧ್ಯಕ್ಷ ಎಚ್.ಎನ್. ಆಶೋಕ್, ಬೆಂಗಳೂರು ಡೇರಿ ಅಧ್ಯಕ್ಷ ನರಸಿಂಹಮೂರ್ತಿ, ದಿಶಾ ಸಮಿತಿ ಸದಸ್ಯ ಜೆ.ಪಿ. ಚಂದ್ರೇಗೌಡ, ಸ್ಥಾಯಿಸಮಿತಿ ಅಧ್ಯಕ್ಷ ಧನಂಜಯ ನಾಯ್ಕ ಸದಸ್ಯರಾದ ಸುರೇಶ್, ಸುಮಾ ರಮೇಶ್, ವೆಂಕಟೇಶ್, ಶಂಕರ್, ಮಾಜಿ ಅಧ್ಯಕ್ಷ ವೆಂಕಟೇಶ್, ಜಿಪಂ ಮಾಜಿ ಸದಸ್ಯ ವಿಜಯ್ ಕುಮಾರ್, ವಿಎಸ್ಸೆಸ್ಸೆನ್ ಅಧ್ಯಕ್ಷ ಶಿವಮೂರ್ತಿ, ಕೆಡಿಪಿ ಸದಸ್ಯ ಗುಡೇಮಾರನಹಳ್ಳಿ ನಾಗರಾಜು, ನಿರ್ದೆಶಕ ಜಯರಾಮು, ಜೆಡಿಎಸ್ ಯುವ ಅಧ್ಯಕ್ಷ ವಿಜಯ್ ಕುಮಾರ್ ಮತ್ತಿತರರು ಇದ್ದರು.

ಓಲೈಕೆ ರಾಜಕಾರಣ ನಿಲ್ಲಿಸಿ

ಬಿಜೆಪಿ ಸರ್ಕಾರ ಓಲೈಕೆ ರಾಜಕಾರಣ ಮಾಡುವುದನ್ನು ಬಿಡಬೇಕು. ಬಡವರನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸಬೇಕು. ಎಲ್ಲರಿಗೂ ಮೀಸಲಾತಿ ಬೇಕೆಂದರೆ, ಮುಂದುವರಿದವರು ಯಾರು ಎಂಬ ಪ್ರಶ್ನೆ ಬರುತ್ತದೆ. ಈ ಬಗ್ಗೆ ಸಾರ್ವಜನಿಕ ಚರ್ಚೆ ಆಗಬೇಕು. ಜಾತಿಗೊಂದು ಕಾರ್ಯಕ್ರಮ ರೂಪಿಸುವುದು ತಪು್ಪ. ಇದಕ್ಕೆ ವೈಯಕ್ತಿಕ ವಿರೋಧವಿದೆ ಎಂದು ಹೇಳಿದರು.