ಖಾಸಗಿ ಶಾಲೆಗಳ ದುಬಾರಿ ಶುಲ್ಕಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಸಿಪಿಐಎಂಎಲ್ ರೆಡ್ ಸ್ಟಾರ್‌ನಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು. ಪಕ್ಷದ ರಾಜ್ಯ ಸಮಿತಿ ಸದಸ್ಯ ಜಿ.ಅಮರೇಶ, ಪದಾಕಾರಿಗಳಾದ ಅಜೀಜ್ ಜಾಗೀರದಾರ್, ಆರ್.ಹುಚ್ಚರೆಡ್ಡಿ, ಅಬ್ಬಾಸ್ ಅಲಿ, ಅನ್ೀ ಅಬಕಾರಿ, ಯಲ್ಲಪ್ಪ, ನಿರಂಜನಕುಮಾರ, ಲಕ್ಷ್ಮಣ ಇದ್ದರು. 
ಜಿಲ್ಲೆ

ಖಾಸಗಿ ಶಾಲೆಗಳ ದುಬಾರಿ ಶುಲ್ಕಕ್ಕೆ ಕಡಿವಾಣ ಹಾಕಿ

ರಾಯಚೂರು: ಖಾಸಗಿ ಶಾಲೆಗಳ ದುಬಾರಿ ಶುಲ್ಕಕ್ಕೆ ಕಡಿವಾಣ ಹಾಕುವ ಮೂಲಕ ಬಡ ಮತ್ತು ಮಧ್ಯಮ ತರಗತಿ ಮಕ್ಕಳ ಪಾಲಕರಿಗೆ ಉಂಟಾಗುತ್ತಿರುವ ಆರ್ಥಿಕ ಹೊರೆಯನ್ನು ತಡಯಬೇಕು ಎಂದು ಸಿಪಿಐಎಂಎಲ್ ರೆಡ್ ಸ್ಟಾರ್ ಒತ್ತಾಯಿಸಿದೆ.
ಪಕ್ಷದ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಶುಕ್ರವಾರ ಮನವಿ ಸಲ್ಲಿಸಿ, ಖಾಸಗಿ ಶಾಲೆ ಆಡಳಿತ ಮಂಡಳಿಗಳು ಡೊನೇಷನ್ ಬದಲಿಗೆ ಟ್ಯೂಷನ್ ಫೀ ಎಂದು ವಸೂಲಿ ಮಾಡುತ್ತಿವೆ ಎಂದು ದೂರಿದರು.
ಖಾಸಗಿ ಶಾಲೆಗಳು ಶುಲ್ಕ ಪಟ್ಟಿ ಪ್ರಕಟಿಸಲು ಆದೇಶಿಸಲಾಗಿದೆ. ಆದರೆ ಶುಲ್ಕ ಪಟ್ಟಿ ಹೆಸರಿಗೆ ಎಂಬಂತಾಗಿದ್ದು, ಡೊನೇಷನ್ ಬದಲು ಟ್ಯೂಷನ್ ಫೀ ಹೆಸರಿನಲ್ಲಿ ಪಾಲಕರಿಗೆ ವಂಚಿಸುವ ಕೆಲಸವನ್ನು ಮಾಡಲಾಗುತ್ತಿದೆ. ಪಾಲಕರು ಅನಿವಾರ್ಯವಾಗಿ ದುಬಾರಿ ಶುಲ್ಕ ನೀಡಿ ಮಕ್ಕಳನ್ನು ಶಾಲೆಗೆ ಸೇರಿಸುವಂತಾಗಿದೆ.
ನಗರದಲ್ಲಿನ ಬಹುತೇಕ ಖಾಸಗಿ ಶಾಲೆಗಳ ಶುಲ್ಕ ಪಟ್ಟಿಯಲ್ಲಿ ಟ್ಯೂಷನ್ ಫೀ ಹೆಸರಿನಲ್ಲಿ ಹೆಚ್ಚಿನ ಹಣ ಪಡೆಯಲಾಗುತ್ತಿದೆ. ಜತೆಗೆ ಸಮವಸ, ಪಠ್ಯ ಪುಸ್ತಕ ಹೆಸರಿನಲ್ಲಿ ಸಾವಿರಾರು ರೂ.ಗಳನ್ನು ಪಡೆಯಲಾಗುತ್ತಿದೆ. ಕೆಲವೊಂದು ಶಾಲೆಗಳು ಶುಲ್ಕ ಪಟ್ಟಿಯನ್ನು ಹಾಕದೆ ಆದೇಶವನ್ನು ಉಲ್ಲಂಸಿವೆ.
ಕೂಡಲೇ ಟ್ಯೂಷನ್ ಫೀ ಹೆಸರಿನಲ್ಲಿ ದುಬಾರಿ ಹಣ ಪಡೆಯುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಸರ್ಕಾರ ನಿಗದಿ ಪಡಿಸಿದ ಶುಲ್ಕವನ್ನು ಮಾತ್ರ ಪಡೆಯುವಂತೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಪಕ್ಷದ ರಾಜ್ಯ ಸಮಿತಿ ಸದಸ್ಯ ಜಿ.ಅಮರೇಶ, ಪದಾಕಾರಿಗಳಾದ ಅಜೀಜ್ ಜಾಗೀರದಾರ್, ಆರ್.ಹುಚ್ಚರೆಡ್ಡಿ, ಅಬ್ಬಾಸ್ ಅಲಿ, ಅನ್ೀ ಅಬಕಾರಿ, ಯಲ್ಲಪ್ಪ, ನಿರಂಜನಕುಮಾರ, ಲಕ್ಷ್ಮಣ ಇದ್ದರು.